• November 16, 2021

ಕೊಡೆ ಮುರುಗ ಚಿತ್ರತಂಡದಿಂದ ಪುನೀತ್ ಗೆ ವಿಶೇಷ ರೀತಿಯ ಶ್ರದ್ಧಾಂಜಲಿ

ಕೊಡೆ ಮುರುಗ ಚಿತ್ರತಂಡದಿಂದ ಪುನೀತ್ ಗೆ ವಿಶೇಷ ರೀತಿಯ ಶ್ರದ್ಧಾಂಜಲಿ

ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ಪುನೀತ್ ರಾಜ್ ಕುಮಾರ್ ರವರಿಗೆ ಅಭಿಮಾನಿಗಳು ಕಲಾವಿದರು ಸಿನಿಮಾ ತಂಡದವರು ರಾಜಕೀಯ ಗಣ್ಯರು ಸಾರ್ವಜನಿಕರು ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ ಅದೇ ರೀತಿಯಲ್ಲಿ ಕೊಡೆ ಮುರುಗ ಸಿನಿಮಾತಂಡ ಪುನೀತ್ ರಾಜ್ ಕುಮಾರ್ ಅವರಿಗೆ ಹಾಡಿನ ಮೂಲಕ ಗೌರವ ಅರ್ಪಿಸಿದೆ …

ಪುನೀತ್ ಟ್ರಿಬ್ಯೂಟ್ ಹಾಡಿಗೆ ಸುಬ್ರಹ್ಮಣ್ಯ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ . ಇನ್ನು ಕೊಡೆಮುರುಗ ಚಿತ್ರದಲ್ಲಿ ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಕುರಿ ಪ್ರತಾಪ್, ರಾಕ್‌ಲೈನ್ ಸುಧಾಕರ್, ದತ್ತಣ್ಣ, ಅರವಿಂದ್ ರಾವ್, ಸ್ವಯಂವರ ಚಂದ್ರು, ಪಲ್ಲವಿ ಗೌಡ, ಕಾಮಿನಿಧರನ್ ಅಭಿನಯ ಮಾಡಿದ್ದು  ಸುಬ್ರಮಣ್ಯ ಪ್ರಸಾದ್ ನಿರ್ದೇಶನ ಮಾಡಿದ್ದಾರೆ…ಚಿತ್ರಕ್ಕೆ ಕೆ ರವಿಕುಮಾರ್ ಬಂಡವಾಳ ಹಾಕಿದ್ರೆ  ರುದ್ರಮನಿ ಬೆಳಗೆರೆ ಕ್ಯಾಮೆರಾ ವರ್ಕ್ ಇದ್ದು ಎಂಎಸ್ ತ್ಯಾಗರಾಜ್ ಸಂಗೀತ ನಿರ್ದೇಶಿಸಿದ್ದಾರೆ…

Leave a Reply

Your email address will not be published. Required fields are marked *