• January 15, 2022

ಪುಷ್ಪ 2 ಸಿನಿಮಾದಲ್ಲಿ ಅಭಿನಯಿಸಲಿದ್ದಾರಾ ಅಕ್ಷಯ್ ಕುಮಾರ್…

ಪುಷ್ಪ 2 ಸಿನಿಮಾದಲ್ಲಿ ಅಭಿನಯಿಸಲಿದ್ದಾರಾ ಅಕ್ಷಯ್ ಕುಮಾರ್…

ಪುಷ್ಪ ಸಿನಿಮಾ Pan India ಸಿನಿಮಾವಾಗಿ ಅಬ್ಬರಿಸುತ್ತಿದೆ. ಇದು ಸಿನಿಮಾದಲ್ಲಿ ಅಭಿನಯಿಸಿರುವ ಹಲವರಿಗೆ ಟರ್ನಿಂಗ್ ಪಾಯಿಂಟ್ ನೀಡಿದೆ. ಅಲ್ಲು ಅರ್ಜುನ್ ಗೆ ಇದು ತಮ್ಮ ವೃತ್ತಿ ಬದುಕಿನ ಬಹು ದೊಡ್ಡ ಸಕ್ಸಸ್ ನೀಡಿದ ಸಿನಿಮಾ ಪುಷ್ಪ..

ಈ ಸಿನಿಮಾದ ನಿರ್ದೇಶಕ ಸುಕುಮಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್ ನಿರ್ದೇಶಕ ಎನಿಸಿಕೊಂಡವರು. ಪುಷ್ಪ ಸಿನಿಮಾ ಈಗಾಗಲೇ 300 ಕೋಟಿ ಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ. ಪುಷ್ಪ ಸಿನಿಮಾದ ಹಿಟ್ ನಂತರ ಹಲವಾರು ಸ್ಟಾರ್ ಹೀರೋಗಳು ಸುಕುಮಾರ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೀಗ ಸುಕುಮಾರ್ ಅವರು ಪುಷ್ಪ 2 ಸಿನಿಮಾಗೆ ಕೈ ಹಾಕಿದ್ದಾರೆ.

ಪುಷ್ಪ 1 ಸಿನಿಮಾದ ಸಕ್ಸಸ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇರುವುದರಿಂದ ಬಾಲಿವುಡ್ ಹೀರೋ ಒಬ್ಬರನ್ನು ಪುಷ್ಪ 2 ಸಿನಿಮಾದಲ್ಲಿ ಹಾಕಿಕೊಳ್ಳಲು ಸುಕುಮಾರ್ ನಿರ್ದಾರ ಮಾಡಿದ್ದಾರೆ.

ಸುಕುಮಾರ್ ಒಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅವರೊಟ್ಟಿಗೆ ಕೆಲಸ ಮಾಡುವಾಸೆ ಇದೆ ಹೇಳಿದ್ದಾರೆ. ಈ ಮೂಲಕ ಅಕ್ಷಯ್ ಕುಮಾರ್ ಅವರು ಪುಷ್ಪ 2 ಸಿನಿಮಾದಲ್ಲಿ ನಟಿಸಬಹುದೇ ಎಂಬ ಸುದ್ಧಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *