- January 28, 2022
ಪ್ರತಿಯೊಂದ ಶೋ ಕೂಡಾ ಹೊಸ ಅನುಭವ ನೀಡಿದೆ – ಅಕುಲ್ ಬಾಲಾಜಿ

ಕನ್ನಡ ಕಿರುತೆರೆಯ ಬಲು ಬೇಡಿಕೆಯ ನಿರೂಪಕರಲ್ಲಿ ಅಕುಲ್ ಬಾಲಾಜಿ ಕೂಡಾ ಒಬ್ಬರು. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ನ ನಿರೂಪಣೆ ಮಾಡುತ್ತಿರುವ ಅಕುಲ್ ಬಾಲಾಜಿ ಈ ಶೋ ನಿಜವಾದ ಪ್ರತಿಭೆಯ ಮೇಲೆ ಉತ್ತಮ ಪರಿಣಾಮ ಉಂಟು ಮಾಡುತ್ತದೆ ಎಂದಿದ್ದಾರೆ.

“ಹಲವು ಸೆಲೆಬ್ರಿಟಿಗಳು ರಿಯಾಲಿಟಿ ಶೋ ಮೂಲಕವೇ ತಮ್ಮ ಪಯಣ ಆರಂಭಿಸಿದ್ದಾರೆ. ಇದು ಅವರ ಕೆರಿಯರ್ ನಲ್ಲಿ ಒಂದು ಅದ್ಭುತವಾದ ಮ್ಯಾಜಿಕ್ ಮಾಡುತ್ತದೆ. ಸೆಲೆಬ್ರಿಟಿಗಳು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದರಿಂದ ಅವರಿಗೆ ಇನ್ನಷ್ಟು ಖ್ಯಾತಿ ದೊರೆಯುತ್ತದೆ. ಇನ್ನು ರಿಯಾಲಿಟಿ ಶೋ ಗಳಿಂದಾಗಿ ಸಾಮಾನ್ಯ ಜನರು ಸೆಲೆಬ್ರಿಟಿ ಆಗುತ್ತಾರೆ. ಇದುವೇ ರಿಯಾಲಿಟಿ ಶೋನ ಶಕ್ತಿ” ಎಂದಿದ್ದಾರೆ.
“ನಾನು ಇದುವರೆಗೂ ಸುಮಾರು 38 ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಇದರಲ್ಲಿ ಪ್ರತಿಯೊಂದು ಶೋ ಕೂಡಾ ಹೊಸ ಅನುಭವ ನೀಡಿವೆ. ಈಗ ಡ್ಯಾನ್ಸಿಂಗ್ ಚಾಂಪಿಯನ್ ನ ನಿರೂಪಣೆ ಮಾಡುತ್ತಿದ್ದೇನೆ. ಈ ಶೋವಿನ ಭಾಗವಾಗಿದ್ದಕ್ಕೆ ನನಗೆ ಸಂತೋಷ ಇದೆ. ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ ಮೇಲೆ ಹಲವು ಸೆಲೆಬ್ರಿಟಿಗಳ ಕೆರಿಯರ್ ಬೆಳೆದಿದ್ದನ್ನು ನೋಡಿದ್ದೇನೆ” ಎನ್ನುತ್ತಾರೆ ಅಕುಲ್ ಬಾಲಾಜಿ
“ರಿಯಾಲಿಟಿ ಶೋನ ಶೂಟಿಂಗ್ ಗೆ ತುಂಬಾ ಶಕ್ತಿ ಬೇಕಾಗುತ್ತದೆ. ಕೆಲವೊಮ್ಮೆ ಶೋ ಹದಿನೆಂಟು ಗಂಟೆಗಳಿಗಿಂತ ಜಾಸ್ತಿ ಇರುತ್ತದೆ. ಆಗ ನಮ್ಮ ಎನರ್ಜಿಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ನಿರೂಪಕ ಆದವನಿಗೆ ಪ್ರತಿಯೊಬ್ಬ ಸ್ಪರ್ಧಿಯೂ ಮುಖ್ಯ. ಅವರಿಗೆ ಶಕ್ತಿ ತುಂಬ ಬೇಕಾಗುತ್ತದೆ. ಇದು ನಿರೂಪಕನಿಗೆ ಟಾಸ್ಕ್ ಆಗಿರುತ್ತದೆ.ಆದರೆ ಎರಡು ಗಂಟೆಗಳ ಕಾಲ ಉತ್ಸಾಹದಿಂದಿರುವುದು ಬೇರೆ. ಆದರೆ ಅದಕ್ಕೂ ಹೆಚ್ಚು ಕಾಲ ಉತ್ಸಾಹದಿಂದ ಇರುವುದು ಸವಾಲು. ನಾನು ಎನರ್ಜಿಯಿಂದ ಇರಲು ಪ್ರಯತ್ನಿಸುತ್ತೇನೆ. ಕೆಲವು ಸವಾಲನ್ನು ತೆಗೆದುಕೊಂಡಿದ್ದೂ ಇದೆ. ವಾಕಿಂಗ್ , ಡ್ಯಾನ್ಸ್ ನ ಹೊಸ ಫಾರ್ಮ್ ಪ್ರಯತ್ನಿಸುವುದು , ಹಾಸ್ಯ ಹಾಗೂ ಹಲವು ವಿಷಯಗಳನ್ನು ಮಾಡುತ್ತಿರುತ್ತೇನೆ” ಎಂದು ಹೇಳುತ್ತಾರೆ ಅಕುಲ್ ಬಾಲಾಜಿ.

ಸದ್ಯ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋವನ್ನು ನಿರೂಪಿಸುತ್ತಿರುವ ಅಕುಲ್ “ಡ್ಯಾನ್ಸ್ ಎನ್ನುವುದು ಒಂದು ಹಬ್ಬ. ಡ್ಯಾನ್ಸ್ ನಲ್ಲಿ ವಿಚಾರ ಮಾಡುವುದಕ್ಕೆ ಹಲವಾರು ವಿಧಗಳಿವೆ. ನಾನು ಇದುವರೆಗೂ ನೋಡದ ಹಲವು ಹೊಸ ಡ್ಯಾನ್ಸ್ ವಿಧಗಳನ್ನು ಈ ಶೋನಲ್ಲಿ ನೋಡಿರುವೆ” ಎಂದು ಶೋ ಬಗ್ಗೆ ಮನಬಿಚ್ಚಿ ಮಾತನಾಡುತ್ತಾರೆ ಅಕುಲ್.





