- January 5, 2022
“ವೆಡ್ಡಿಂಗ್ ಗಿಫ್ಟ್ ” ಹಿಡಿದು ಬಂದ ನಟಿ ಪ್ರೇಮಾ

ನಮ್ಮೂರ ಮಂದಾರದ ಚೆಲುವೆ ನಟ ಪ್ರೇಮ ಚಿತ್ರರಂಗದಿಂದ ದೂರ ಉಳಿದು ಸಾಕಷ್ಟು ದಿನಗಳು ಕಳೆದಿದ್ವು…2017ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದ ನಂತ್ರ ಪ್ರೇಮ ಎಲ್ಲಿಯೂ ಕಾಣಿಸಿಕೊಂಡಿಲ್ಲ…ಸಿನಿಮಾ ಮಾತ್ರವಲ್ಲದೆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಕೂಡ ಪ್ರೇಮಾ ಭಾಗಿಯಾಗಿರಲಿಲ್ಲ ಆದರೆ ಈಗ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಮೂಲಕ ಪ್ರೇಮ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ …

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದಲ್ಲಿ ನಟಿ ಪ್ರೇಮಾ ಅಭಿನಯ ಮಾಡಿದ್ದಾರೆ …ವೆಡ್ಡಿಂಗ್ ಗಿಫ್ಟ್ ಸಿನಿಮಾದ ಚಿತ್ರೀಕರಣ ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಮುಂತಾದಕಡೆ ಮೂವತ್ತೇಳು ದಿನಗಳ ಚಿತ್ರೀಕರಣ ನಡೆದಿದೆ. ಗಂಡ-ಹೆಂಡತಿ ನಡುವೆ ನಡೆಯುವ ಕಥಾಹಂದರ. ಸಕ್ಷನ್ 498 ಸಂಬಂಧಿಸಿದ ಕೆಲವು ಸನ್ನಿವೇಶಗಳು ಚಿತ್ರದಲ್ಲಿದೆ.

ಸಿನಿಮಾದಲ್ಲಿ ನಿಶಾನ್ ನಾಣಯ್ಯ – ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರದಲ್ಲಿ ಓಂ ಖ್ಯಾತಿ ಪ್ರೇಮ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಲೋಕೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ..