- January 22, 2022
ಐರಾಗೆ ಶುರುವಾಯ್ತು ಅಕ್ಷರ ಅಭ್ಯಾಸ

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾ ಈಗಾಗಲೇ ತನ್ನ ತುಂಟತನದಿಂದ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದ್ದಾಳೆ… ಐರಾ ಹುಟ್ಟಿದ ದಿನದಿಂದಲೂ ಇಲ್ಲಿಯವರೆಗೂ ಒಂದಲ್ಲ ಒಂದುರೀತಿಯ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದಾಳೆ…
ಕಳೆದ ಬಾರಿ ನಟಿ ರಾಧಿಕಾ ಪಂಡಿತ್ ತಮ್ಮ ಮಗಳಿಗೆ ಕೊಂಕಣಿ ಭಾಷೆಯನ್ನು ಅಭ್ಯಾಸ ಮಾಡಿಸುವುದರ ಜೊತೆಗೆ ಅಪ್ಪನನ್ನ ಕೊಂಕಣಿಯಲ್ಲಿ ಏನೆಂದು ಕರೆಯುತ್ತಾರೆ ಎನ್ನುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು…ಅಭಿಮಾನಿಗಳು ಕೂಡ ಐರಾ ತೊದಲುನುಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು …ಈಗ ಐರಾಗೆ ನಟ ಯಶ್ ಅಕ್ಷರ ಅಭ್ಯಾಸ ಮಾಡಿಸುತ್ತಿದ್ದಾರೆ…
ಮನೆಯೇ ಮೊದಲ ಪಾಠಶಾಲೆ ಎನ್ನುವ ಮಾತಿದೆ ಅದರಂತೆಯೇ ಯಶ್ ಮಗಳಿಗೆ ಅ ಆ ಇ ಈ ಹೇಳಿಕೊಡುವ ವೀಡಿಯೋವನ್ನು ರಾಧಿಕ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ…ಆರಂಭದಲ್ಲಿಯೇ ಕನ್ನಡ ಅಕ್ಷರಗಳನ್ನು ಹೇಳಿಕೊಡುತ್ತಿರುವುದನ್ನ ಕಂಡ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ ..3ವರ್ಷಗಳಿಂದ ಕೋವಿಡ್ ನಿಂದ ಮಕ್ಕಳು ಶಾಲೆಯಿಂದ ತಪ್ಪಿಸಿಕೊಂಡರು ಕೂಡ ಪೋಷಕರು ಮಕ್ಕಳಿಗೆ ಮನೆಯಲ್ಲೇ ಅಕ್ಷರ ಅಭ್ಯಾಸ ಯಾವ ರೀತಿಯಲ್ಲಿ ಮಾಡಿಸಬೇಕು ಅನ್ನೋದಕ್ಕೆ ಸದ್ಯ ಯಶ್ ಹಂಚಿಕೊಂಡಿರುವ ವೀಡಿಯೋ ಸಾಕ್ಷಿಯಾಗಿದೆ