- December 14, 2021
ಅರ್ಜುನ್ ಸರ್ಜಾಗೆ ಕೊರೋನಾ ಪಾಸಿಟಿವ್

ನಟ ಅರ್ಜುನ್ ಸರ್ಜಾಗೆ ಕೋರನ ಪಾಸಿಟಿವ್ ಆಗಿರುವುದು ದೃಢವಾಗಿದೆ.. ಈ ವಿಚಾರವನ್ನ ಖುದ್ದು ಅರ್ಜುನ್ ಸರ್ಜಾ ಅವರೇ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ ..

ನನಗೆ ಸೋಂಕು ತಗುಲಿದ್ದು ಅದಕ್ಕಾಗಿ ನಾನು ಅನುಸರಿಸಬೇಕಾದ ಎಲ್ಲ ರೀತಿಯ ಕ್ರಮಗಳನ್ನ ತೆಗೆದುಕೊಂಡಿದ್ದೇನೆ.. ಅದಷ್ಟೇ ಅಲ್ಲದೆ ನಾನು ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ ..ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಂಥ ಪ್ರತಿಯೊಬ್ಬರು ಕರೋನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ…
ಅರ್ಜುನ್ ಸರ್ಜಾ ಅವ್ರಿಗೆ ಕೊರೋನಾ ಸೋಂಕು ತಗುಲಿರೋದು ಇದೇ ಮೊದಲಲ್ಲ.. ಈ ಹಿಂದೆಯೂ ಅರ್ಜುನ್ ಸರ್ಜಾ ಅವ್ರಿಗೆ ಕೊರೋನಾ ಪಾಸಿಟಿವ್ ಆಗಿತ್ತು..
