- December 25, 2021
ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ಸದ್ಯ ನ್ಯಾಷನಲ್ ಲೆವಲ್ನಲ್ಲಿ ಗುರ್ತಿಸಿಕೊಂಡಿರುವ ನಾಯಕ ನಟ… ಯಶ್ ಕೋವಿಡ್ ಬಂದಾಗಿನಿಂದ ಎಲ್ಲಿಯೂ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿಲ್ಲ… ಸಾಕಷ್ಟು ದಿನಗಳ ನಂತರ ತಮ್ಮ ಜಿಮ್ ಟ್ರೈನರ್ ಹಾಗೂ ಗೆಳೆಯ ಆಗಿರುವಂತಹ ಪಾನಿಪುರಿ ಕಿಟ್ಟಿ ಅವರ ಹೋಟೆಲ್ ಉದ್ಘಾಟನೆಗೆ ಯಶ್ ಆಗಮಿಸಿದ್ದರು ..ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಯಶ್ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ ..

ಮುಂದಿನ ವರ್ಷ ಅಂದರೆ ಜನವರಿ ಎಂಟರಂದು ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ… ಈಗಾಗಲೇ ಕಳೆದ 2ವರ್ಷಗಳಿಂದ ಕೋವಿಡ್ ಕಾರಣದಿಂದ ಯಶ್ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿಲ್ಲ… ಅಭಿಮಾನಿಗಳು ಮನೆಯಿಂದಲೇ ತಮಗೆ ಶುಭ ಕೋರುವಂತೆ ಯಶ್ ಮನವಿ ಮಾಡಿದ್ದರು… ಅದೇ ರೀತಿ ಈ ವರ್ಷವೂ ಕೂಡ ಬರ್ತಡೇ ಆಚರಣೆ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ..

ಅದಷ್ಟೇ ಅಲ್ಲದೆ ಬರ್ತಡೇ ವಿಶೇಷವಾಗಿ ಯಾವುದೇ ಸಿನಿಮಾದ ಟೀಸರ್ ಟ್ರೈಲರ್ ಬಿಡುಗಡೆ ಆಗುತ್ತಿಲ್ಲ ಎನ್ನುವುದನ್ನು ಕೂಡ ತಿಳಿಸಿದ್ದಾರೆ.. ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಟೀಸರ್ ಅಥವಾ ಟ್ರೇಲರ್ ಬಿಡುಗಡೆ ಆಗುತ್ತೆ ಎನ್ನುವ ನಿರೀಕ್ಷೆಯಿತ್ತು ಆದರೆ ಈ ಎರಡೂ ನಿರೀಕ್ಷೆಯನ್ನ ಹುಸಿ ಮಾಡಿದ್ದಾರೆ ಯಶ್…