• November 13, 2021

ನಾಳೆ ಗಣಿಯ “ಸಖತ್” ಟೈಟಲ್ ಸಾಂಗ್ ರಿಲೀಸ್..

ನಾಳೆ ಗಣಿಯ “ಸಖತ್” ಟೈಟಲ್ ಸಾಂಗ್ ರಿಲೀಸ್..

ಸುನಿ – ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್. ಈ ಜೋಡಿ ಜೊತೆಯಾಗಿ ಪ್ರೇಕ್ಷಕರಿಗೆ ಸಖತ್ ಕಾಮಿಡಿ ಹೂರಣ ಬಡಿಸಲು ಸಜ್ಜಾಗಿದ್ದಾರೆ. ಸಖತ್ ಸಿನಿಮಾ ಮೂಲಕ ಸಿನಿಪ್ರೇಕ್ಷಕ ಕುಲವನ್ನು‌ ನಗುವಿನ ಅಲೆಯಲ್ಲಿ ತೇಲಿಸಲು ರೆಡಿಯಾಗಿದ್ದಾರೆ. ನಾಳೆ  ಸಖತ್ ಸಿನಿಮಾದ ಟೈಟಲ್ ರಿಲೀಸ್ ಆಗ್ತಿದೆ. ಗಣೇಶ್ ಅವರನ್ನ ಹೊಸ ಅವತಾರದಲ್ಲಿ ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್  ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ

ಕಾಮಿಡಿ ಜೊತೆ ರಿಯಾಲಿಟಿ ಸುತ್ತ ಎಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ಪೋಷಕ ಪಾತ್ರ ನಿಭಾಯಿಸಿದ್ದಾರೆ.

Leave a Reply

Your email address will not be published. Required fields are marked *