• April 2, 2022

ಭೂಗತ ಜಗತ್ತಿನ ದೊರೆ ‘ಹಿಟ್ಲರ್’ ಈಗ ಇನ್ನೊಂದು ಅವತಾರದಲ್ಲಿ…

ಭೂಗತ ಜಗತ್ತಿನ ದೊರೆ ‘ಹಿಟ್ಲರ್’ ಈಗ ಇನ್ನೊಂದು ಅವತಾರದಲ್ಲಿ…

ಭೂಗತ ಜಗತ್ತಿನ ದೊರೆ ‘ಹಿಟ್ಲರ್’ ಆಗಿ ಬೆಳ್ಳಿತೆರೆಯನ್ನ ಆಳಿದ ಬಳಿಕ ನಾಯಕನಟ ಆರವ್ ಅವರು ಇದೀಗ ನ್ಯಾಯವಾದಿಯಾಗಲಿದ್ದಾರೆ. ಶ್ರೀಧರ್ ಕಶ್ಯಪ್ ನಿರ್ದೇಶನದ ‘ಕೇಸ್ ನಂಬರ್: 786’ ಇವರ ಮುಂದಿನ ಚಿತ್ರ. ಚಂದ್ರಮೋಹನ್ ಆರ್ ಅವರ ‘ವಿಥಿ ಸಿನಿ ಕ್ರಿಯೇಷನ್ಸ್’ ಸಂಸ್ಥೆಯಡಿಯಲ್ಲಿ ಮೂಡಿಬರುತ್ತಿರೋ ಈ ಸಿನಿಮಾದ ಫರ್ಸ್ಟ್ ಲುಕ್ ಈಗಾಗಲೇ ಅನಾವರಣಗೊಂಡಿದೆ.

ಜಯಚಂದ್ರ. ಜೆ. ಡಿ ಅವರ ಕಥೆ-ಮಾತುಕತೆ ಇರೋ ಈ ಚಿತ್ರಕ್ಕೆ, ಎಂ. ಬಿ. ಅಲ್ಲಿಕಟ್ಟಿ ಅವರ ಛಾಯಾಗ್ರಾಹಣ, ಎನ್. ಎಂ. ವಿಶ್ವ ಅವರ ಸಂಕಲನ ಹಾಗು ಪ್ರವೀಣ್ ಲಕ್ಷ್ ಅವರ ವಿಎಫ್ಎಕ್ಸ್ ಲಭ್ಯವಾಗಲಿದೆ. ನಿರ್ದೇಶಕ ಶ್ರೀಧರ್ ಕಶ್ಯಪ್ ಅವರೇ ಚಿತ್ರಕ್ಕೆ ಸಂಗೀತ ತುಂಬುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಕೆರಳಿಸುತ್ತಿದೆ.

ಭಾರಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಕೇಸ್ ನಂಬರ್ 786 ಒಂದು ಕ್ರೈಂ-ಥ್ರಿಲರ್ ಕಥೆಯಾಗಿರಲಿದ್ದು ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಈ ಹೊಸ ಪಾನ್-ಇಂಡಿಯನ್ ಸಿನಿಮಾಗೆ ದಕ್ಷಿಣ ಭಾರತದ ಬೇರೆ-ಬೇರೆ ಚಿತ್ರರಂಗಗಳ ಹೆಸರಾಂತ ಕಲಾವಿದರು ಒಂದಾಗಲಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

Leave a Reply

Your email address will not be published. Required fields are marked *