• May 22, 2022

ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಗಟ್ಟಿಮೇಳ ಅಂಜಲಿ

ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಗಟ್ಟಿಮೇಳ ಅಂಜಲಿ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಒಟ್ಟು 145 ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕಿರುತೆರೆ ನಟಿ ಮಹತಿ ವೈಷ್ಣವಿ ಭಟ್ ಕೂಡ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ತಂಗಿ ಅಂಜಲಿಯಾಗಿ ಅಭಿನಯಿಸುತ್ತಿರುವ ಮಹತಿ ವೈಷ್ಣವಿ ಭಟ್ 619 ಅಂಕಗಳನ್ನು ಪಡೆದಿದ್ದಾರೆ.

ಕನ್ನಡದಲ್ಲಿ 124, ಇಂಗ್ಲೀಷ್ ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನ 99 ಅಂಕಗಳನ್ನು ಗಳಿಸಿದ್ದಾರೆ. ಈ ಬಗ್ಗೆ ಇನ್ಸ್ಟಾ ಗ್ರಾಂ ನಲ್ಲಿ ಬರೆದುಕೊಂಡಿರುವ ಮಹತಿ “ಫಲಿತಾಂಶ ಹೊರ ಬಿದ್ದಿದೆ. ನನಗೆ ಸಂತೋಷವಾಗಿದೆ. ನನಗೆ ಬೆಂಬಲ ನೀಡಿದ ಅಪ್ಪ, ಅಮ್ಮ, ಅಣ್ಣಯ್ಯ, ತಾತಯ್ಯ, ಅಮ್ಮಮ್ಮ ಇವರಿಗೆ ಧನ್ಯವಾದಗಳು” ಎಂದಿದ್ದಾರೆ.

ಇದರ ಜೊತೆಗೆ “ನಟನೆ ಹಾಗೂ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಶಿಕ್ಷಕರು ಹಾಗೂ ಶಾಲೆಗೆ ಧನ್ಯವಾದಗಳು. ಜೀ ಕನ್ನಡ ಹಾಗೂ ಗಟ್ಟಿ ಮೇಳ ತಂಡಕ್ಕೆ ದನ್ಯವಾದಗಳು. ನಿಮ್ಮೆಲ್ಲರ ಸಹಕಾರ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ”ಎಂದು ಅಂಜಲಿ ಪಾತ್ರಧಾರಿ ಬರೆದುಕೊಂಡಿದ್ದಾರೆ.

ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ಶೋನ ಮೊದಲ ಸೀಸನ್ ನಲ್ಲಿ ಸ್ಫರ್ಧಿಸಿದ್ದ ಮಹತಿ ಮನೋಜ್ಞ ನಟನೆಯ ಮೂಲಕ ತೀರ್ಪುಗಾರರ ಮನಸನ್ನು ಗೆದ್ದಿದ್ದರು. ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಕಿರಿಯ ಸಹೋದರಿ ಅಂಜಲಿ ಪಾತ್ರ ಮಾಡುತ್ತಿದ್ದು ನಟನೆ ಹಾಗೂ ಓದನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ.

Leave a Reply

Your email address will not be published. Required fields are marked *