• June 8, 2022

ಶಿವಣ್ಣ-ರಜನಿ ಚಿತ್ರಕ್ಕೆ ನಾಯಕನಟಿ ಇವರೇ!!

ಶಿವಣ್ಣ-ರಜನಿ ಚಿತ್ರಕ್ಕೆ ನಾಯಕನಟಿ ಇವರೇ!!

ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರಕ್ಕೆ ರಜನಿಕಾಂತ್ ಹಾಗು ಕರುನಾಡ ಚಕ್ರವರ್ತಿ ಶಿವಣ್ಣ ಒಂದಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ತಮಿಳಿನ ‘ಡಾಕ್ಟರ್’ ಹಾಗು ‘ಬೀಸ್ಟ್’ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಮೇರುನಟರನ್ನು ನಿರ್ದೇಶಿಸಲಿದ್ದಾರೆ. ತಲೈವ ರಜನಿಕಾಂತ್ ಅವರ 169ನೇ ಚಿತ್ರ ಇದಾಗಿರಲಿದ್ದು, ತಾತ್ಕಾಲಿಕವಾಗಿ ಚಿತ್ರಕ್ಕೆ ‘ತಲೈವರ್169’ ಎಂದು ಹೆಸರು ಕೂಡ ಇಡಲಾಗಿದೆ. ಶಿವಣ್ಣನ ಜೊತೆಗೆ ಒಂದು ಹಂತದ ಮಾತುಕಥೆಯನ್ನು ನೆಲ್ಸನ್ ಮುಗಿಸಿದ್ದಾರೆ ಎಂಬ ಸುದ್ದಿ ಒಂದುಕಡೆಯಾದರೆ ಇದೀಗ ಚಿತ್ರದ ಹೀರೋಯಿನ್ ಬಗೆಗಿನ ಹೊಸ ಸುದ್ದಿ ಹೊರಬೀಳುತ್ತಿದೆ.

ರಜನಿಕಾಂತ್ ಅವರ ಈ ಹೊಸ ಚಿತ್ರಕ್ಕೆ ನಾಯಕಿ ಬೇರಾರು ಅಲ್ಲ, ವಿಶ್ವಸುಂದರಿ ಐಶ್ವರ್ಯ ರೈ. ಬಾಲಿವುಡ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಶ್ವರ್ಯ ರೈ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ರಜನಿ ಅವರೊಂದಿಗೆ ‘ರೋಬೊ’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ಇವರು, ಇದೀಗ ರಜನಿಕಾಂತ್ ಅವರ 169ನೇ ಚಿತ್ರಕ್ಕೆ ನಾಯಕಿಯಾಗುವುದರ ಮೂಲಕ ಮತ್ತೆ ದಕ್ಷಿಣ ಸಿನಿರಂಗದತ್ತ ಮುಖಮಾಡಲಿದ್ದಾರೆ. ರಜನಿಕಾಂತ್, ಶಿವಣ್ಣ ಜೊತೆಗೆ ಐಶ್ವರ್ಯ ರೈ ಅವರು ಕೂಡ ತಾರಾಗಣವನ್ನು ಸೇರಿಕೊಂಡಿರುವುದು ಸಿನಿಮಾದ ಬಗೆಗಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಲಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರಲಿರೋ ಈ ಸಿನಿಮಾಗೆ ಅನಿರುಧ್ ರವಿಚಂದರ್ ಅವರ ಸಂಗೀತ ಇರಲಿದೆ.

Leave a Reply

Your email address will not be published. Required fields are marked *