• July 13, 2022

ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ನಟಿ!

ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ನಟಿ!

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಜೋಡಿ ಇತ್ತೀಚೆಗಷ್ಟೇ ಅಧಿಕೃತವಾಗಿ ವಿವಾಹವಾದರು. ಆಪ್ತರ ವಲಯ, ಕುಟುಂಬಸ್ಥರನ್ನು ಮಾತ್ರ ಸೇರಿಸಿ ಮದುವೆಯಾದುದರಿಂದ ಇವರ ಮದುವೆ ನೋಡಬೇಕೆಂದರೂ ಅಭಿಮಾನಿಗಳಿಗೆ ಏನೇನು ಸಿಗಲಿಲ್ಲ. ಮದುವೆಯ ದಿನ ನಯನತಾರಾ ಮತ್ತು ವಿಘ್ನೇಶ್ ಹೇಗೆ ರೆಡಿಯಾಗಿದ್ದರು ಎಂಬುದನ್ನು ಕೆಲವು ಫೋಟೊಗಳಲ್ಲಷ್ಟೇ ನೋಡಬೇಕಾಯಿತು. ಆದರೆ ಸಿಕ್ಕ ಅಲ್ಪಸ್ವಲ್ಪ ಫೋಟೊದಲ್ಲಿ ಎಲ್ಲರ ಗಮನ ಸೆಳೆದಿದ್ದು ನಯನತಾರಾ ಸೀರೆ.

ಇದೀಗ ಮದುವೆ ಕಳೆದು ಹಲವು ದಿನಗಳಾದರೂ ಆ ಸೀರೆ ಇನ್ನೂ ಸುದ್ದಿಯಲ್ಲಿದೆ. ಅದೇನಪ್ಪ ಅಂದ್ರೆ ಸತ್ಯ ಧಾರಾವಾಹಿಯ ಗಂಡು ಬೀರಿಯಂತಿದ್ದ ಸತ್ಯ ಈಗ ಕಂಪ್ಲೀಟ್ ಗೃಹಿಣಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಗಂಡು ಮಕ್ಕಳಿಗಿಂತ ಹೆಚ್ಚಾಗಿಯೇ ನಿಂತು ಮನೆಯ ಜವಾಬ್ದಾರಿಯನ್ನೆಲ್ಲಾ ತೆಗೆದುಕೊಂಡಿದ್ದವಳು ಈಗ ಸಂಸಾರದಲ್ಲಿ ಗೃಹಿಣಿಯಾಗಿ ಹೇಗೆಲ್ಲಾ ಇರಬೇಕು ಎಂಬುದನ್ನು ಕಲಿಯುತ್ತಿದ್ದಾಳೆ.
ಈ ಮಧ್ಯೆ ಹೊಸ ಫೋಟೊ ಒಂದನ್ನು ಶೇರ್ ಮಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ನಟಿ ನಯನತಾರಾ ಅವರ ಮದುವೆ ಸೀರೆಯನ್ನು ಸತ್ಯ ಇದೀಗ ರಿ ಕ್ರಿಯೇಟ್ ಮಾಡಿದ್ದಾಳೆ.

ನಟಿ ನಯನತಾರಾ ಅವರು ಮದುವೆಯಲ್ಲಿ ಕಡು ಕೆಂಪು ಸೀರೆಯನ್ನುಟ್ಟು, ಅದಕ್ಕೆ ಹಸಿರು ಬಣ್ಣದ ಜ್ಯುವೆಲ್ಲರಿ ಹಾಕಿ ಮಿಂಚಿದ್ದರು. ನಟಿಯರ ಮದುವೆ ಎಂದಾಕ್ಷಣಾ ಮೊದಲು ಗಮನ ಹೋಗುವುದೇ ಅವರ ಕಾಸ್ಟ್ಯೂಮ್ ಮೇಲೆ. ಅದರಂತೆ ನಯನತಾರಾ ಸೀರೆ ಮೇಲೂ ಎಲ್ಲರ ಚಿತ್ತ ಇತ್ತು. ಒಂದೇ ಬಣ್ಣದ ಸೀರೆಯನ್ನುಟ್ಟಿದ್ದ ಕಾರಣ ಅದರ ಸ್ಪೆಷಾಲಿಟಿ ಬಗ್ಗೆಯೇ ಎಲ್ಲರ ಗಮನ ಹೋಗಿತ್ತು. ಅದರಂತೆಯೇ ಸೀರೆಯ ಸ್ಪೆಷಾಲಿಟಿ ಏನಿರಬಹುದು ಎಂದು ಸರ್ಚ್ ಮಾಡಿದಾಗ ಅದರ ವಿಶೇಷತೆ ತಿಳಿಯಿತು. ಸೀರೆಗೆ ಹೊಯ್ಸಳ ಹೊಳಪು ನೀಡಲಾಗಿತ್ತು. ಅಷ್ಟೇ ಅಲ್ಲ ಗಂಡನ ಹೆಸರನ್ನು ಕೆತ್ತಲಾಗಿತ್ತು. ಇದೇ ಕಾರಣಕ್ಕೆ ಸಾಕಷ್ಟು ವಿಶೇಷತೆಯನ್ನು ಹೊಂದಿತ್ತು. ಇದೀಗ ಇದೇ ರೀತಿಯ ಸೀರೆಯನ್ನು ಗೌತಮಿ ಜಾದವ್ ಹಾಕಿಕೊಂಡು ಪೋಸ್ ನೀಡಿದ್ದಾರೆ.

ಸದ್ಯ ಗೌತಮಿ ಜಾದವ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವಂತ ನಟಿ. ಇತ್ತೀಚೆಗೆ ಸಾಕಷ್ಟು ಫೋಟೊಶೂಟ್‌ಗಳನ್ನು ಮಾಡಿಸುತ್ತಿದ್ದಾರೆ. ವೆರೈಟಿ ವೆರೈಟಿ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಡಾರ್ಕ್ ರೆಡ್ ಸೀರೆಯಲ್ಲಿ ಹಸಿರು ಬಣ್ಣದ ಜ್ಯುವೆಲ್ಲರಿ ಹಾಕಿ ಹೊಸ ಫೋಟೊಶೂಟ್ ಮಾಡಿಸಿದ್ದಾರೆ. ಒಂದು ಕ್ಷಣ ಈ ಫೋಟೊಗಳನ್ನು ನೋಡಿದರೆ ಇದು ಗೌತಮಿ ಜಾದವ್ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಯಾಕೆಂದರೆ ಥೇಟ್ ನಯನತಾರಾ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ.

ಗೌತಮಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೂಪರ್ ಆಗಿ ಕಾಣುತ್ತಿದ್ದೀರಾ ಅಂತ ಹೊಗಳಿ ಹಾರ್ಟ್ ಸಿಂಬಲ್ ನೀಡುತ್ತಿದ್ದಾರೆ. ಸತ್ಯಾಗೆ ಹೇಳಿ ಕೇಳಿ ನಯನಾತಾರಾ ಎಂದರೆ ಬಲು ಇಷ್ಟ. ಹೀಗಾಗಿಯೇ ಅವರ ಮದುವೆಯ ಉಡುಗೆಯಲ್ಲಿ ಮಿಂಚಿರುವ ಸತ್ಯಾಗೆ ವಿಶೇಷ ಕಳೆ ಬಂದಿದ್ದು ಅದ್ಭುತವಾಗಿ ಕಾಣುತ್ತಿದ್ದಾರೆ.