• November 25, 2021

“ರತ್ನನ್ ಪ್ರಪಂಚ” ದಲ್ಲಿ ಸುತ್ತಿದ ಮೇಲೆ ಸಂಬಂಧಗಳ ಬೆಲೆ ಗೊತ್ತಾಗಲೇಬೇಕಲ್ಲವೇ..!

“ರತ್ನನ್ ಪ್ರಪಂಚ” ದಲ್ಲಿ ಸುತ್ತಿದ ಮೇಲೆ ಸಂಬಂಧಗಳ ಬೆಲೆ ಗೊತ್ತಾಗಲೇಬೇಕಲ್ಲವೇ..!

ಸಂಬಂಧಗಳ, ಭಾವನೆಗಳ ಪ್ರಾಮುಖ್ಯತೆಯನ್ನು ಸಾರುವ ಚಿತ್ರ ರತ್ನನ್ ಪ್ರಪಂಚ ಒಟಿಟಿ ಯಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಚಿತ್ರ.

ನಾವು ಬದುಕಿನಲ್ಲಿ ಕೆಲವೊಮ್ಮೆ ಆಧುನಿಕತೆಗೆ ತಲೆಬಾಗಿ ನಮ್ಮ ಮನೆಯವರ ಸಂಬಂಧಗಳ ಕುರಿತು ಅಸಡ್ಡೆ ಭಾವವನ್ನು ಹೊಂದರುತ್ತೇವೆ.

ತಂದೆ ತಾಯಂದಿರು ಆಧುನಿಕತೆ ತಿಳಿದಿಲ್ಲ ಎಂಬ ಕಾರಣಕ್ಕೆ ಅವರ identity ಯನ್ನೇ ಹೇಳಿಕೊಳ್ಳಲು ಹಿಂಜರಿಯುವ ಮಟ್ಟಕ್ಕೆ ಹೋಗುವುದುಂಟು. ನಂತರ ಕಾಲವೇ ಸಂಬಂಧಗಳ ಆಳವನ್ನು ಅರಿವು ಮಾಡಿಕೊಟ್ಟ ನಂತರ ಅದರ ಬೆಲೆ ತಿಳಿದು ಬದುಕುವ ನಿದರ್ಶನಗಳಿವೆ.

ಉಮಾಶ್ರೀ, ಶೃತಿ, ಡಾಲಿ ಧನಂಜಯ್ ಹೀಗೆ ಅಧ್ಬುತ ತಾರಾಬಳಗದೊಂದಿಗೆ ಯುವ ಪೀಳಿಗೆಗೆ ತಂದೆ,ತಾಯಿ, ಒಡಹುಟ್ಟಿದವರು ಪ್ರೀತಿ ಸ್ನೇಹಗಳ ನಿಜವಾದ ಆಳವನ್ನು ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದೆ.