• May 6, 2022

ಸಂಭ್ರಮದಲ್ಲಿ ಪ್ರಿಯಾಂಕ ಉಪೇಂದ್ರ

ಸಂಭ್ರಮದಲ್ಲಿ ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಈಗ ಸಂಭ್ರಮದಲ್ಲಿದ್ದಾರೆ. ಪ್ರಿಯಾಂಕಾ ಅವರು ಇಂಡಸ್ಟ್ರಿಯಲ್ಲಿ 25 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿದ್ದಾರೆ. ಸದ್ಯ ತಮ್ಮ 50ನೇ ಸಿನಿಮಾ ಡಿಟೆಕ್ಟಿವ್ ತೀಕ್ಷ್ಣ ದಲ್ಲಿ ಇನ್ವೆಸ್ಟಿಗೇಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತ್ರಿವಿಕ್ರಮ ರಘು ನಿರ್ದೇಶನ ಮಾಡುತ್ತಿದ್ದಾರೆ.

“ಈ ಸಿನಿಮಾ ಹಲವು ಕಾರಣಗಳಿಗೆ ವಿಶೇಷವಾಗಿದೆ. 50 ಸಿನಿಮಾಗಳು ಯಾವ ನಟನಟಿಯರಿಗೆ ಆದರೂ ಹೆಗ್ಗುರುತಿನ ಸಂದರ್ಭವೇ ಸರಿ. ಈ ಸಿನಿಮಾ ಉಳಿದ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಎಂದು ನನಗೆ ಖುಷಿಯಾಗಿದೆ. ಮಹಿಳಾ ಪತ್ತೇದಾರಿ ಪಾತ್ರವನ್ನು ಕನ್ನಡವು ನೋಡಿದೆ ಎಂದು ನಾನು ಭಾವಿಸುವುದಿಲ್ಲ.ಬಇಲ್ಲಿ ನನ್ನ ಪಾತ್ರ ದೈಹಿಕ ಶಕ್ತಿಯನ್ನು ಬಳಸುವುದಿಲ್ಲ. ಕೇಸ್ ಗಳನ್ನು ಬಗೆಹರಿಸಲು ಮಾನಸಿಕ ಅಚಲತೆಯನ್ನು ಅವಲಂಬಿಸಿದೆ” ಎಂದಿದ್ದಾರೆ.

“ಸಿನಿಮಾದ ಮೋಷನ್ ಪೋಸ್ಟರ್ ಮೇ 12ರಂದು ಬಿಡುಗಡೆಯಾಗಲಿದೆ. ನನ್ನ ಮಗ ಆಯುಷ್ ಇದನ್ನು ರಿಲೀಸ್ ಮಾಡುತ್ತಾನೆ. ಅಂದು ಅವನ ಬರ್ತ್ ಡೇ ಹಾಗೂ ಅವನ ತಾಯಿಯ ಚಿತ್ರದಿಂದ ಒಂದು ಔಪಚಾರಿಕವಾಗಿ ಕ್ಷಣವನ್ನು ಆರಂಭಿಸಲು ಇದೊಂದು ಉತ್ತಮ ಕ್ಷಣ ಎಂದು ಚಿತ್ರತಂಡ ಭಾವಿಸಿದೆ” ಎಂದು ನಗುತ್ತಾರೆ ಪ್ರಿಯಾಂಕಾ. ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.

Leave a Reply

Your email address will not be published. Required fields are marked *