- May 17, 2022
ಪೇಟಾ ಇಂಡಿಯಾ ದಿಂದ ಪ್ರಶಸ್ತಿ ಪಡೆದ ಪೂಜಾ ಭಟ್… ಯಾಕೆ ಗೊತ್ತಾ?

ಬಾಲಿವುಡ್ ನಟಿ ಹಾಗೂ ನಿರ್ದೇಶಕಿ ಪೂಜಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈಗ ಪೇಟಾ ಇಂಡಿಯಾ ಅವರಿಗೆ ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸುವುದಿಲ್ಲ ಎಂಬ ಪ್ರತಿಜ್ಞೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದ ಭಾರತದ ಮೊದಲ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಟ್ವಿಟ್ಟರ್ ನಲ್ಲಿ ಪೇಟಾ ಇಂಡಿಯಾ ಕಳುಹಿಸಿರುವ ಪತ್ರದ ಫೋಟೋ ಹಂಚಿಕೊಂಡಿದ್ದಾರೆ. “ಡಿಯರ್ ಭಟ್ , ಫಿಶ್ ಐ ನೆಟ್ವರ್ಕ್ ಪರವಾಗಿ ಸಿನಿಮಾಗಳಲ್ಲಿ ಪ್ರಾಣಿಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ದೇಶದ ಮೊದಲ ನಿರ್ದೇಶಕರಾಗಿರುವ ನಿಮಗೆ ನಾವು ಕೃತಜ್ಞರಾಗಿರುತ್ತೇವೆ. ಈ ನಿಮ್ಮ ಬದ್ಧತೆ ವಿಶ್ವದ ಹಲವು ನಿರ್ದೇಶಕರಿಗೆ ಸ್ಪೂರ್ತಿಯಾಗಿದೆ ಹಾಗೂ ಸೆಟ್ ಹಾಗೂ ಆಫ್ ಸೆಟ್ ನಲ್ಲಿ ಪ್ರಾಣಿಗಳಿಗೆ ತೊಂದರೆ ಹಾಗೂ ಗಾಯಗಳಾಗುವುದನ್ನು ತಪ್ಪಿಸುತ್ತದೆ. ಪ್ರಾಣಿಗಳ ಮೇಲಿನ ನಿಮ್ಮ ದಯೆಗಾಗಿ ನಮ್ಮ ಮೆಚ್ಚುಗೆಯ ಸೂಚಕವಾಗಿ ಪೆಟಾ ಇಂಡಿಯಾದ ಸಹಾನುಭೂತಿಯ ಸಿನಿಮಾ ಕಂಪೆನಿಯ ಪ್ರಶಸ್ತಿಯನ್ನು ನಿಮಗೆ ನೀಡಲು ನಾವು ಸಂತೋಷ ಪಡುತ್ತೇವೆ. ಶುಭಾಶಯಗಳು”ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಫೋಟೋ ಜೊತೆ ಪೂಜಾ “ಈ ಗೌರವಕ್ಕೆ ಧನ್ಯವಾದಗಳು. ಪೇಟಾ ಭಾರತ ಈ ವಿಷಯದಲ್ಲಿ ಮುನ್ನಡೆಯಲು ಸಂತೋಷ ಪಡುತ್ತಿದೆ. ನಾನು ಮಾಡುವ ಯಾವುದೇ ಸಿನಿಮಾ ಹಾಗೂ ಶೋಗಳಲ್ಲಿ ಪ್ರಾಣಿಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಿದ್ದೇನೆ. ನನ್ನ ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬರೆಯಲು ಕಂಪ್ಯೂಟರ್ ಗ್ರಾಫಿಕ್ಸ್ ನ್ನು ಬಳಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.


ಈ ಪೋಸ್ಟ್ ಗೆ ಹಲವು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಹಾಲಿಡೇ ,ಜಿಸ್ಮ್ 2 ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಪೂಜಾ ಸನಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

