• April 9, 2022

ಕನ್ನಡ ಸಿನಿರಂಗಕ್ಕೆ ಹೊಸ ನಟಿ

ಕನ್ನಡ ಸಿನಿರಂಗಕ್ಕೆ ಹೊಸ ನಟಿ

ಹೆಡ್ ಬುಷ್ ಚಿತ್ರದ ಮೂಲಕ ನಟಿ ಪಾಯಲ್ ರಜಪೂತ್ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ನಟ ಧನಂಜಯ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಪಾಯಲ್ ರಜಪೂತ್ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಪಾಯಲ್ ರಜಪೂತ್ ಹೆಡ್ ಬುಷ್ ಕುರಿತು ಹಾಕಿರುವ ಪೋಸ್ಟ್ ವೊಂದನ್ನು ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದು ಅದೀಗ ವೈರಲ್ ಆಗಿದೆ.

ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರುವ ಪಾಯಲ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಯೊಬ್ಬರು ನೀವು ಯಾವಾಗ ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ? ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ನಟಿ ಪಾಯಲ್ ಅವರು ಕೋ ಆ್ಯಕ್ಟರ್ ಧನಂಜಯ್ ಜೊತೆ ಇರುವ ಫೋಟೋ ಶೇರ್ ಮಾಡಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.

“ಈಗಾಗಲೇ ನಾನು ಚಂದನವನಕ್ಕೆ ಕಾಲಿಟ್ಟಾಗಿದೆ. ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ನಾನು ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು ನನ್ನ ಪಾತ್ರದ ಚಿತ್ರೀಕರಣವೂ ಕೂಡಾ ಮುಗಿದಿದೆ. ಇನ್ನು ಸೆಪ್ಟೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ” ಎಂದು ಹೇಳಿದ್ದಾರೆ ಪಾಯಲ್ ರಜಪೂತ್. ಇನ್ನು ಪಾಯಲ್ ಅವರು ಟ್ಯಾಗ್ ಮಾಡಿರುವ ಪೋಸ್ಟ್ ನ್ನು ನಟ ಧನಂಜಯ್ ಕೂಡಾ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಡ್ ಬುಷ್ ಸಿನಿಮಾದಲ್ಲಿ ಡಾನ್ ಪಾತ್ರಕ್ಕೆ ಧನಂಜಯ್ ಜೀವ ತುಂಬಿದ್ದಾರೆ.‌ ಇನ್ನು ಉಳಿದಂತೆ ಶ್ರುತಿ ಹರಿಹರನ್ ,ರಘು ಮುಖರ್ಜಿ ,ಲೂಸ್ ಮಾದ , ವಸಿಷ್ಠ ಸಿಂಹ ಮುಂತಾದವರು ತಾರಾಗಣದಲ್ಲಿದ್ದಾರೆ‌.

Leave a Reply

Your email address will not be published. Required fields are marked *