• May 28, 2022

ಅಭಿಮಾನಿಗಳಿಗೆ ವಿಭಿನ್ನ ಖುಷಿ ನೀಡಿದ ಕಿಚ್ಚ ಸುದೀಪ್

ಅಭಿಮಾನಿಗಳಿಗೆ ವಿಭಿನ್ನ ಖುಷಿ ನೀಡಿದ ಕಿಚ್ಚ ಸುದೀಪ್

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಸಿನಿಮಾ ಕಲಾವಿದರು ರೀಲ್ಸ್ ಮಾಡುವುದು ಹಳೆಯ ವಿಷಯ. ನಟಿಮಣಿಯರಂತೂ ಹೇಳುವುದು ಬೇಡ, ಆಗಾಗ ತಮ್ಮ ನೆಚ್ಚಿನ ಹಾಡಿಗೋ, ಡೈಲಾಗ್ ಗೋ ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ನಟರ ವಿಷಯಕ್ಕೆ ಬಂದರೆ ಅವರು ಇದರಲ್ಲಿ ಕಾಣಿಸಿಕೊಳ್ಳವುದು ಕಡಿಮೆಯೇ ಅರ್ಥಾತ್ ಬಹಳ ಅಪರೂಪ.

ಇದೀಗ ನಿಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರು ರೀಲ್ಸ್ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸುದೀಪ್ ರೀಲ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ಸಕತ್ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ ಚಿತ್ರದ ‘ಗಡಂಗ್ ರಕ್ಕಮ್ಮ’ ಹಾಡಿಗೆ ರೀಲ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಅಂದ ಹಾಗೇ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ರೀಲ್ಸ್ ಮಾಡಿದ್ದು ಅದಕ್ಕೆ ಕಾರಣ ಜಾಕ್ವೆಲಿನ್ ಫರ್ನಾಂಡಿಸ್. ನಟಿ ಜಾಕ್ವೆಲಿನ್ ಕನ್ನಡದಲ್ಲಿ ಮಾತನಾಡಿದ ಕಾರಣ ಸುದೀಪ್ ರೀಲ್ಸ್ ಮಾಡಿದ್ದಾರೆ.

ಜಾಕ್ವೆಲಿನ್ ವಿಡಿಯೋ ಮೂಲಕ ಕಿಚ್ಚ ಸುದೀಪ್‌ ಬಳಿ ರೀಲ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರು ಹೇಳಿದ ಕೂಡಲೇ ಸುದೀಪ್ ರೀಲ್ಸ್ ಮಾಡಲಿಲ್ಲ. ಸುದೀಪ್ ಅವರು ಜಾಕ್ವೆಲಿನ್ ಗೆ ಕನ್ನಡ ಹೇಳಿಕೊಟ್ಟಿದ್ದು, ಆಕೆ ಕನ್ನಡದಲ್ಲಿ ಮಾತನಾಡಿದ ಬಳಿಕ ರೀಲ್ಸ್ ಮಾಡಿದ್ದು. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟನ ಮೊದಲ ರೀಲ್ಸ್ ನೋಡಿ ನೆಟ್ಟಿಗರು ಮಾತ್ರವಲ್ಲ ಸಿನಿಪ್ರಿಯರು ಬೆರಗಾಗಿದ್ದಾರೆ.

Leave a Reply

Your email address will not be published. Required fields are marked *