• August 30, 2021

ಟಾಲಿವುಡ್ ಮಂದಿ ಕಣ್ಣು ಯಶ್ ಮೇಲೆ.! ಒನ್ ಲೈನ್ ಕಥೆ ಕೇಳಿ ಅಚ್ಚರಿಗೊಂಡ್ರ ರಾಕಿ ಬಾಯ್ ?? ಏನಾಗಿದೆ ಗೊತ್ತೇ ??

ಟಾಲಿವುಡ್ ಮಂದಿ ಕಣ್ಣು ಯಶ್ ಮೇಲೆ.! ಒನ್ ಲೈನ್ ಕಥೆ ಕೇಳಿ ಅಚ್ಚರಿಗೊಂಡ್ರ ರಾಕಿ ಬಾಯ್ ?? ಏನಾಗಿದೆ ಗೊತ್ತೇ ??

ಸ್ನೇಹಿತರೆ, ಸಿನಿಮಾರಂಗ ಅನ್ನೋದೇ ಹಾಗೆ ಗೆಲ್ಲೋ ಕುದುರೆಯ ಹಿಂದೆ ಓಡೋ ಮಂದಿ ಇರ್ತಾರೆ. ಸದ್ಯ ಕೆಜಿಎಫ್ ರಾಕಿ ಬಾಯ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಟಾಲಿವುಡ್ ನ ಸ್ಟಾರ್ ನಿರ್ದೇಶಕರು ಯಶ್ ಹಿಂದೆ ಬಿದ್ದಿದ್ದಾರೆ. ಅಲ್ಲದೆ ಯಶ್ ಗೆ ಒಂದು ಕಥೆ ಮಾಡಬೇಕು ಅಂತ ಸಾಹಸ ಕೂಡ ಮಾಡುತ್ತಿದ್ದಾರೆ. ಇನ್ನು ನಾನು ಕರ್ನಾಟಕದಲ್ಲಿ ಕಟೌಟ್ ಆಗಬೇಕು ಎಂದು ಆಸೆಹೊತ್ತು ಬೆಂಗಳೂರಿಗೆ ಬಂದವರು ಸದ್ಯ ಫ್ಯಾನ್ ಇಂಡಿಯಾದ ಕಟೌಟ್ ಆಗಿದ್ದಾರೆ.

ಇನ್ನು ಕೆಜಿಎಫ್ ಎನ್ನುವ ಬಂಗಾರದ ಬೆಳ್ಳಿ ಸಿನಿಮಾವನ್ನು ಕಳೆದ ಐದು ವರ್ಷದಿಂದ ಶ್ರಮ ಶ್ರದ್ಧೆ ಮತ್ತು ತಪಸ್ಸಿನಿಂದ ಮಾಡಿ ಈಗ ಕೆಜಿಎಫ್ ಎರಡನೇ ಅಧ್ಯಾಯ ಅಂತ್ಯದಲ್ಲಿ ಬಂದು ನಿಂತಿದ್ದಾರೆ. ಹೀಗಾಗಿ ಯಶ್ ಅವರ ಮುಂದಿನ ಹೆಜ್ಜೆಯನ್ನು ಬಿಗ್ ಪ್ರೊಡ್ಯೂಸಸ್ ಗಳಿಂದ ಹಿಡಿದು ಸ್ಟಾರ್ ಡೈರೆಕ್ಟರ್ ಗಳ ತನಕ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬೆನ್ನಲೆ ತೆಲುಗಿನ ಓರ್ವ ಸ್ಟಾರ್ ಡಾಕ್ಟರ್ ಕೂಡ ಯಶ್ ಗೆ ಕಥೆ ಹೇಳಿ ಅವರನ್ನು ಮೆಚ್ಚಿಸಿದ್ದಾರಂತೆ. ಅವರು ಬೇರೆ ಯಾರೂ ಅಲ್ಲ ಬೋಯಪಾಟಿ ಶ್ರೀನು.

ಹೌದು ಯಶ್ ಹಿಂದೆ ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಗಳಲ್ಲಿ ಒಬ್ಬರಾದ ಬೋಯಪಾಟಿ ಶ್ರೀನು ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಯಶ್ ಅವರಿಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನ ಮಾಡಬೇಕು ಎಂದು ಕೂಡ ಅಂದುಕೊಂಡಿದ್ದರಂತೆ. ಈ ಬೆನ್ನಲ್ಲೇ ಯಶ್ ಅವರಿಗೆ ಕಥೆ-1 ರೆಡಿ ಮಾಡಿ ಒನ್ ಲೈನ್ ಕಥೆ ಹೇಳಿ ಇಂಪ್ರೆಸ್ ಮಾಡಿದ್ದಾರಂತೆ ಶ್ರೀನು. ಅಷ್ಟೇ ಅಲ್ಲದೆ ರಾಮ್ ಚರಣ್ ತೇಜ ಗೆ ಮಾಡಿದಂತಹ ಕಥೆಯನ್ನು ಸದ್ಯ ಯಶ್ ಅವರಿಗೆ ಮಾಡಲು ಹೊರಟಿದ್ದಾರೆ ಲೆಜೆಂಡ್ ಖ್ಯಾತಿಯ ಬೋಯಪಾಟಿ ಶ್ರೀನು.

ಸದ್ಯ ರಾಮ್ ಚರಣ್ ತೇಜ ಬೇಡ ಎಂಬ ಕಥೆಯನ್ನು ನಿರ್ದೇಶಕ ಯಶ್ ಅವರಿಗೆ ಹೇಳಿ ಒಪ್ಪಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಕೆಜಿಎಫ್ 2 ಸಿನಿಮಾದ ಎಲ್ಲಾ ಕೆಲಸವನ್ನು ಮುಗಿಸಿರುವ ಯಶ್ ಚಿತ್ರ ಬಿಡುಗಡೆಯಾಗಲು ಇನ್ನು ಎಂಟು ತಿಂಗಳು ಬಾಕಿ ಇದೆ. ಹೀಗಾಗಿ ಈ ಮಧ್ಯೆ ಯಶ್ ಅವರು ಯಾವುದಾದರೂ ಸಿನಿಮಾವನ್ನು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಅವರ ಮುಂದಿನ ನಡೆ ಹೇಗಿರುತ್ತೆ ಅಂತ ಕಾದುನೋಡಬೇಕಾಗಿದೆ‌. ಸ್ನೇಹಿತರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *