• June 16, 2022

ಜೊತೆಜೊತೆಯಲಿ ನನ್ನ ಜೀವನ ಬದಲಾಯಿಸಿದ ಪಯಣ – ಮಾನಸ ಮನೋಹರ್

ಜೊತೆಜೊತೆಯಲಿ ನನ್ನ ಜೀವನ ಬದಲಾಯಿಸಿದ ಪಯಣ – ಮಾನಸ ಮನೋಹರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದೆ. ಯಶಸ್ವಿ 700 ಸಂಚಿಕೆ ಪೂರೈಸುತ್ತಿರುವ ಜೊತೆಜೊತೆಯಲಿ ಧಾರಾವಾಹಿಯು ಸಾವಿರ ಸಂಚಿಕೆಯತ್ತ ದಾಪುಗಾಲು ಹಾಕುತ್ತಿದೆ. ಈ ಸಂತಸದ ವಿಚಾರವನ್ನು ಮಾನಸ ಮನೋಹರ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಅವರ ಪರ್ಸನಲ್ ಅಸಿಸ್ಟೆಂಟ್ ಮೀರಾ ಆಗಿ ಅಭಿನಯಿಸುತ್ತಿರುವ ಮಾನಸ ಮನೋಹರ್ ಅವರು ಈ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ್ದಾರೆ. ಮೀರಾ ಪಾತ್ರದ ಫೋಟೋ ಹಂಚಿಕೊಂಡಿರುವ ಮಾನಸ ಮನೋಹರ್ “ಜೊತೆ ಜೊತೆಯಲಿ ಧಾರಾವಾಹಿ 700 ಸಂಚಿಕೆ ಪೂರೈಸಿದೆ. ಇದು ನನ್ನ ಜೀವನವನ್ನು ಬದಲಾಯಿಸಿದ ಪಯಣ ಎಂದೇ ನಾನು ಭಾವಿಸಿದ್ದೇನೆ. ನಮ್ಮ ತಂಡವನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದ ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಎಂಬಿಎ ಪದವೀಧರೆಯಾಗಿರುವ ಮಾನಸ ಮನೋಹರ್ ಅವರಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವಿತ್ತು. ವಿದ್ಯಾಭ್ಯಾಸದ ಜೊತೆಗೆ ಆಡಿಶನ್ ಗಳನ್ನು ಕೂಡಾ ಅಟೆಂಡ್ ಮಾಡಲಾರಂಭಿಸಿದ ಮಾನಸ ಅಶ್ವಿನಿ ನಕ್ಷತ್ರ ಧಾರಾವಾಹಿಗೆ ಆಯ್ಕೆಯೂ ಆದರು. ಆದರೆ ಆಗ ಎಂಬಿಎ ಪರೀಕ್ಷೆ ಇದ್ದ ಕಾರಣ ಅತಿಥಿ ಪಾತ್ರಧಾರಿಯಾಗಿಯಾಗಿ ಕಾಣಿಸಿಕೊಂಡರು.

ಮಾನಸ ಮನೋಹರ್ ಅವರ ನಟನೆ ನೋಡಿದ ಆರೂರು ಜಗದೀಶ್ ಮುಂದೆ ತಮ್ಮ ಧಾರಾವಾಹಿಗಳಲ್ಲಿ ಮಾನಸಗೆ ಪ್ರಮುಖ ಪಾತ್ರವನ್ನೇ ನೀಡಿದರು. ಜೊತೆಜೊತೆಯಲಿ ಧಾರಾವಾಹಿಯ ಮೀರಾ ಹೆಗ್ಡೆಯಾಗಿ ನಟಿಸುವ ಅವಕಾಶ ಬಂದಾಗ ಇದು ನೆಗೆಟಿವ್ ಹಾಗೂ ಪಾಸಿಟಿವ್ ಪಾತ್ರಗಳ ಸಮಾಗಮ. ನಟಿ ಆದವಳಿಗೆ ಇದು ಚಾಲೆಂಜಿಗ್ ಆದ ಪಾತ್ರ” ಎಂದು ಹೇಳುತ್ತಾರೆ ಮಾನಸ ಮನೋಹರ್.

ಆರೂರು ಜಗದೀಶ್ ತಂಡ ನನ್ನ ಎರಡನೇ ಕುಟುಂಬ ಎಂದು ಹೇಳುವ ಮಾನಸ 2014 ರ ಮಿಸ್ ಕರ್ನಾಟಕ ಕಿರೀಟ ಪಡೆದಿದ್ದಾರೆ. ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ ಮೈ ಡಾರ್ಲಿಂಗ್ ನಲ್ಲಿ ನಲ್ಲಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *