• May 30, 2022

ಹರಹರ ಮಹಾದೇವ ನನ್ನ ಬದುಕಿನ ತಿರುವು – ವಿನಯ್ ಗೌಡ

ಹರಹರ ಮಹಾದೇವ ನನ್ನ ಬದುಕಿನ ತಿರುವು – ವಿನಯ್ ಗೌಡ

ನಟ ವಿನಯ್ ಗೌಡ ಕನ್ನಡ ಪ್ರೇಕ್ಷಕರಿಗೆ ಹೊಸಬರೇನಲ್ಲ. ಪೌರಾಣಿಕ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಮಹಾದೇವದಲ್ಲಿ ನಟಿಸಿರುವ ವಿನಯ್ ಕಿರುತೆರೆಯ ಖ್ಯಾತ ನಟರಲ್ಲಿ ಒಬ್ಬರು.

“ಹರ ಹರ ಮಹಾದೇವ ಧಾರಾವಾಹಿ ನನ್ನ ಬದುಕಿನ ತಿರುವು. ನಾವು ಮನೆಯಲ್ಲಿ ಕಾಲಭೈರವೇಶ್ವರನನ್ನು ಪೂಜಿಸುತ್ತೇವೆ. ನಾನು ಕೈಯಲ್ಲಿ ಕಾಲಭೈರವೇಶ್ವರನ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಆದರೆ ಶಿವನ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ಆಕಸ್ಮಿಕ. ನನಗೆ ಶಿವ ದೇವರ ಪಾತ್ರ ಸಿಕ್ಕಿದ್ದು ಆಶೀರ್ವಾದ” ಎಂದು ಹೇಳಿದ್ದಾರೆ.

ಶಿವನ ಪಾತ್ರ ಮಾಡುವಾಗ ಇದ್ದ ಸವಾಲುಗಳ ಬಗ್ಗೆ ಹೇಳಿರುವ ವಿನಯ್ “ಭಾಷೆ ನನಗೆ ತುಂಬಾ ಕಷ್ಟವಾಗಿತ್ತು. ಡೈಲಾಗ್ ಹಾಗೂ ಚಿತ್ರಕಥೆ ಕೇಳಿ ಕೆಲವೊಮ್ಮೆ ಬೆಚ್ಚಿದ್ದೆ. ಅದು ತುಂಬಾ ಉದ್ದುದ್ದವಾಗಿ ಇರುತ್ತಿತ್ತು. ಶೂಟಿಂಗ್ ಮುಗಿಸಿ ಮನೆಗೆ ತೆರಳಿದ ಮೇಲೆ ಭಾಷಾ ಕೌಶಲ್ಯದ ಮೇಲೆ ಕೆಲಸ ಮಾಡುತ್ತಿದ್ದೆ. ಪ್ರಾರಂಭದ ದಿನಗಳಲ್ಲಿ ತುಂಬಾ ಕಷ್ಟವಾಗಿತ್ತು. ಆದರೆ ದಿನಗಳೆದಂತೆ ಬದಲಾಗುತ್ತಿತ್ತು.” ಎಂದಿದ್ದಾರೆ.

“ದೈನಂದಿನ ಧಾರಾವಾಹಿಗಳಲ್ಲಿ ಇತರ ಪಾತ್ರಗಳಿಗಿಂತ ಭಿನ್ನವಾಗಿ ನಾನು ನೋಡಬಹುದಾದ ಯಾವುದೇ ನೈಜ ಜೀವನದ ಉಲ್ಲೇಖವಿಲ್ಲ. ನಟರು ಈ ಮೊದಲು ಸಿನಿಮಾಗಳಲ್ಲಿ ಶಿವನ ಪಾತ್ರ ಮಾಡಿದ್ದರು ‌. ನನಗೆ ನನ್ನದೇ ಆದ ಅಲೆ ಮೂಡಿಸಬೇಕೆಂದು ಬಯಸಿದ್ದೆ. ಧ್ಯಾನ ನನ್ನ ಭಾವನೆಗಳನ್ನು ತಣಿಸಲು ಹಾಗೂ ಶಿವನನ್ನು ನನ್ನಲ್ಲಿ ತರಲು ಸಹಾಯಕವಾಯಿತು. ಕೆರಿಯರ್ ನಲ್ಲಿ ಎರಡನೇ ಬಾರಿ ಶಿವನ ಪಾತ್ರವನ್ನು ಮಾಡಲು ಪುಣ್ಯ ಮಾಡಿದ್ದೆ. ಕೆಲವು ಸನ್ನಿವೇಶಗಳಿಂದಾಗಿ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯಿಂದ ಹೊರಬರಬೇಕಾಯಿತು. ಎಲ್ಲರಿಗೂ ಇದೇ ರೀತಿಯ ಪಾತ್ರ ಮಾಡಲು ಅವಕಾಶ ಸಿಗುವುದಿಲ್ಲ” ಎಂದಿದ್ದಾರೆ ವಿನಯ್ ಗೌಡ.

Leave a Reply

Your email address will not be published. Required fields are marked *