• June 15, 2022

ಶುಗರ್ ಲೆಸ್ ತಂಡದಿಂದ ಸಿಹಿಸುದ್ದಿ!

ಶುಗರ್ ಲೆಸ್ ತಂಡದಿಂದ ಸಿಹಿಸುದ್ದಿ!

ಕೆ.ಎಂ. ಶಶಿಧರ್ ನಿರ್ಮಾಣ ಹಾಗೂ ನಿರ್ದೇಶನದ, ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಮುಖ್ಯಭೂಮಿಕೆಯಲ್ಲಿರುವ ಶುಗರ್ ಲೆಸ್ ಚಿತ್ರ ಬಿಡುಗಡೆಗೆ ತಯಾರಾಗಿದೆ. ಮುಂದಿನ ತಿಂಗಳು ಅಂದರೆ ಜುಲೈ 8 ರಂದು ಶುಗರ್ ಲೆಸ್ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಚನೆ ಮಾಡುತ್ತಿದೆ.

ಶುಗರ್ ಲೆಸ್ ಸಿನಿಮಾ ಬಿಡುಗಡೆಯಾಗುವುದಕ್ಕಾಗಿ ಚಿತ್ರತಂಡವೂ ಕೂಡಾ ಕಾತರದಿಂದ ಕಾಯುತ್ತಿದ್ದು, ಇದರ ನಡುವೆ ಮಗದೊಂದು ಸಿಹಿ ಸುದ್ದಿ ಹೊರಬಂದಿದ್ದು ಚಿತ್ರತಂಡ ಡಬಲ್ ಖುಷಿಯಲ್ಲಿದೆ.

ಶುಗರ್ ಲೆಸ್ ಸಿನಿಮಾದ ರಿಮೇಕ್ ಹಕ್ಕುಗಳು ಮಾರಾಟವಾಗಿದೆ. ಹೌದು, ಈ ಸಿನಿಮಾದ ಹಿಂದಿ ರಿಮೇಕ್ ಹಕ್ಕುಗಳನ್ನು ಬ್ಲ್ಯಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್‌ನ ಶಿವ ಆರ್ಯನ್ ಅವರು ಖರೀದಿ ಮಾಡಿದ್ದಾರೆ.
ಸಿನಿಮಾದ ಮೇಕಿಂಗ್ ನ ಜೊತೆಗೆ ಕಂಟೆಂಟ್ ಕೂಡಾ ಇಷ್ಟವಾದ ಕಾರಣ ಶಿವ ಆರ್ಯನ್ ಅವರು ಉತ್ತಮ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ.

ಉದ್ಯಮದ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಶಿವ ಆರ್ಯನ್ ಶುಗರ್ ಲೆಸ್ ಸಿನಿಮಾವನ್ನು ಯಾವಾಗ ಹಿಂದಿಯಲ್ಲಿ ಮಾಡಲಿದ್ದಾರೆ ಎಂಬುದು ಇನ್ನು ತಿಳಿಯಬೇಕಷ್ಟೆ.

Leave a Reply

Your email address will not be published. Required fields are marked *