- January 14, 2022
ಪ್ರಗ್ನೆನ್ಸಿ ಸಮಯವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ ಅಮೂಲ್ಯ!

ನಟಿ ಅಮೂಲ್ಯ ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗಲಿದ್ದಾರೆ…ಸದ್ಯ ಏಳು ತಿಂಗಳ ಗರ್ಭಿಣಿ ಆಗಿರೋ ಅಮೂಲ್ಯ ಮಡಿಲಿನಲ್ಲಿ ಇನ್ನೆರೆಡು ತಿಂಗಳಲ್ಲಿ ಮುದ್ದಾದ ಮಗು ನಲಿದಾಡಲಿದೆ…
ಸದ್ಯ ಗರ್ಭಿಣಿಯಾಗಿರೋ ಅಮೂಲ್ಯ ಈ ಸಮಯವನ್ನ ಸಖತ್ ಖುಷಿ ಖುಷಿಯಿಂದ ಕಳೆಯುತ್ತಿದ್ದಾರೆ…ಹೌದು ಇತ್ತೀಚೆಗೆ ತಮ್ಮ ಸ್ನೇಹಿತರನ್ನ ಮೀಟ್ ಮಾಡಿದ್ದ ಅಮೂಲ್ಯ ಒಂದಿಷ್ಟು ಸಮಯವನ್ನ ಅವರೊಟ್ಟಿಗೆ ಕಳೆದು ಎಂಜಾಯ್ ಮಾಡಿದ್ರು…

ತಾವು ಗರ್ಭಿಣಿ ಅನ್ನೋ ವಿಚಾರವನ್ನ ತಿಳಿಸಲು ಫೋಟೋ ಶೂಟ್ ಮಾಡಿಸಿದ್ದ ಅಮ್ಮು ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ…ಗ್ರೇ ಕಲರ್ ಗೌನ್ ನಲದಲಿ ಅಮೂಲ್ಯ ಕಾಣಿಸಿಕೊಂಡಿದ್ದು ಪತಿ ಜಗದೀಶ್ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ…