• June 15, 2022

ಕ್ರೇಜಿ ಸ್ಟಾರ್ ಮಗನ ‘ಪ್ರೀ-ರಿಲೀಸ್’ ಇವೆಂಟ್

ಕ್ರೇಜಿ ಸ್ಟಾರ್ ಮಗನ ‘ಪ್ರೀ-ರಿಲೀಸ್’ ಇವೆಂಟ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳೇ ಕಳೆದಿವೆ. ಇದೀಗ ಅವರ ಪುತ್ರರಿಬ್ಬರೂ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಇವರ ಮೊದಲನೇ ಮಗನಾದ ಮನೋರಂಜನ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡನೇ ಮಗನಾದ ವಿಕ್ರಮ್ ರವಿಚಂದ್ರನ್ ಅವರ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಹನಾ ಮೂರ್ತಿ ಅವರು ನಿರ್ದೇಶಿಸಿರುವ ‘ತ್ರಿವಿಕ್ರಮ’ ಸಿನಿಮಾ ವಿಕ್ರಮ್ ಅವರ ಮೊದಲನೇ ಚಿತ್ರ. ಸದ್ಯ ಈ ಚಿತ್ರ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆ, ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ರಾಮ್ಕೋ ಸೋಮಣ್ಣ ಅವರ ನಿರ್ಮಾನದಲ್ಲಿ ಮೂಡಿಬರುತ್ತಿರುವ ‘ತ್ರಿವಿಕ್ರಮ’ ಸಿನಿಮಾದಲ್ಲಿ ವಿಕ್ರಂ ರವಿಚಂದ್ರನ್, ಆಕಾಂಕ್ಷ ಶರ್ಮ, ಅಕ್ಷರ ಗೌಡ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇದೆ ಜೂನ್ 24ರಂದು ‘ತ್ರಿವಿಕ್ರಮ’ ತೆರೆಮೇಲೆ ಬರಲು ಸಿದ್ದನ್ನಾಗಿದ್ದಾನೆ. ಅದೇ ಕಾರಣಕ್ಕೆ ಚಿತ್ರತಂಡ ಜೂನ್ 19ರಂದು ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಚಿತ್ರರಂಗದ ಗಣ್ಯರ ದಂಡೇ ಈ ದಿನ ವೇದಿಕೆ ಏರಲಿದೆ. ರವಿಚಂದ್ರನ್, ಡಾಲಿ ಧನಂಜಯ, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶಿವಣ್ಣ, ಶರಣ್, ನೀನಾಸಮ್ ಸತೀಶ್ ಹಾಗು ಮನೋರಂಜನ್ ರವಿಚಂದ್ರನ್ ಈ ‘ಪ್ರೀ-ರಿಲೀಸ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಸಿನಿಮಾದ ಸಂಗೀತ ನಿರ್ದೇಶಕರಾಗಿರುವ ಅರ್ಜುನ್ ಜನ್ಯ ಅವರ ‘ಮ್ಯೂಸಿಕಲ್ ನೈಟ್’ ಕೂಡ ಏರ್ಪಡಿಸಲಾಗಿದೆ. ಸಂಜೀತ್ ಹೆಗ್ಡೆ, ಅಂಕಿತ್ ಕುಂಡ ಮುಂತಾದವರು ತಮ್ಮ ಗಾಯನದಿಂದ ನೆರೆದಿರುವವರನ್ನು ರಂಜಿಸಲಿದ್ದಾರೆ.

ಈಗಾಗಲೇ ರವಿಚಂದ್ರನ್ ಅವರ ‘ಕ್ರೇಜಿ ಸ್ಟಾರ್’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುವ ಮೂಲಕ ಚಿತ್ರರಂಗದಲ್ಲಿ ತಮ್ಮ ನಟನಾ ಪಯಣವನ್ನು ಆರಂಭಿಸಿರುವ ವಿಕ್ರಮ್ ಅವರು ಇದೇ ಜೂನ್ 24ರಿಂದ ‘ತ್ರಿವಿಕ್ರಮ’ನಾಗಿ ಕನ್ನಡಿಗರ ಮುಂದೆ ಬರಲಿದ್ದಾರೆ. ಸಿನಿಮಾದ ಹಾಡುಗಳು ಯುವಜನತೆಯ ಮನದಲ್ಲಿ ಭರ್ಜರಿಯಾಗಿ ಕೂತಿದ್ದು ಝೆಡ್ ಸಿನಿಮಾ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *