- December 4, 2021
ಹಿರಿಯ ನಟ ಶಿವರಾಮ್ ಆರೋಗ್ಯ ಮತ್ತಷ್ಟು ಗಂಭೀರ.

ಅಪಘಾತದಲ್ಲಿ ಗಾಯಗೊಂಡು ನಂತ್ರ ಕಾಲು ಜಾರಿಬಿದ್ದ ಕಾರಣ ಹಿರಿಯ ನಟ ಶಿವರಾಂ ಆಸ್ಪತ್ರೆಗೆ ದಾಖಲಾಗಿದ್ದಾರೆ…ಹಿರಿಯ ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು …ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದ್ಯಂತೆ ಶಿವರಾಮ್ ಅವ್ರ ಆರೋಗ್ಯ ಪರಿಸ್ಥಿತಿ…

ಕಳೆದ ಎರಡು ದಿನಗಳಿಂದ ಚಿಕಿತ್ಸೆ ನಡೆಯುತ್ತಿದ್ದು ಸದ್ಯದ ಮಾಹಿತಿ ಪ್ರಕಾರ ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದಿದ್ದಾರೆ ವೈದ್ಯರು…ಅದಷ್ಟೆ ಅಲ್ಲದೆ ಈ ಸಮಯದಲ್ಲಿ ಯಾವುದೇ ಮಿರಾಕಲ್ ನಡೆಯೋ ಸಾಧ್ಯತೆ ಇಲ್ಲ ಅಂತಿವೆ ವೈದ್ಯ ಮೂಲಗಳು…

ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದಾರೆ ಹಿರಿಯ ನಟ ಶಿವರಾಂ ..ಸರ್ಜರಿ ಮಾಡೋಕೆ ಆಗುವಷ್ಟು ಚೇತರಿಕೆ ಕಂಡಿಲ್ಲ 84 ವರ್ಷ ವಯಸ್ಸಾಗಿರೋ ಕಾರಣ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ…ಹೊಸಕೇರೆ ಹಳ್ಳಿ ಪ್ರಶಾಂತ್ ಆಸ್ಪತ್ರೆಯಲ್ಲಿ ಹಿರಿಯ ನಟನಿಗೆ ಚಿಕಿತ್ಸೆ ಮುಂದುವರೆದಿದೆ…