• June 18, 2022

ಬಾಡಿಶೇಮಿಂಗ್ ನ ವಿರುದ್ದ ಗುಡುಗಿದ ಕಿರುತೆರೆಯ ಪಾಚು

ಬಾಡಿಶೇಮಿಂಗ್ ನ ವಿರುದ್ದ ಗುಡುಗಿದ ಕಿರುತೆರೆಯ ಪಾಚು

ಪಾಪಾ ಪಾಂಡು ಪಾಚು ಎಂದೇ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಶಾಲಿನಿ ಸತ್ಯನಾರಾಯಣ ಅವರ ನಿಜವಾದ ಹೆಸರು ಏನೆಂಬುದೇ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಪಾಚು ಆಲಿಯಾಸ್ ಶ್ರೀಮತಿ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಶಾಲಿನಿಯನ್ನು ಜನ ಇಂದಿಗೂ ನೆನಪಿಸಿಕೊಳ್ಳುವುದು ಅದೇ ಪಾತ್ರದ ಮೂಲಕ. ಧಾರಾವಾಹಿ ಮುಗಿದು ದಶಕಗಳು ಕಳೆದರೂ ಅವರ ಪಾತ್ರ ಜನರ ಮನಸ್ಸಿಂದ ಮಾಸಿಲ್ಲ. ಅಷ್ಟರ ಮಟ್ಟಿಗೆ ಆ ಪಾತ್ರ ಮೋಡಿ ಮಾಡಿದೆ.

ನಟನೆ ಮಾತ್ರವಲ್ಲದೇ ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಶಾಲಿನಿ ಸತ್ಯನಾರಾಯಣ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಸ್ಟಾರ್ ನ ನಿರೂಪಕಿಯಾಗಿ ಮೋಡಿ ಮಾಡುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಶಾಲಿನಿ ಅವರು ಕೂಡಾ ಬಾಡಿ ಶೇಮಿಂಗ್ ಗೆ ಒಳಗಾಗಿದ್ದಾರೆ.

ತಮ್ಮ ದೇಹ ಹಾಗೂ ತೂಕದ ಕುರಿತಾಗಿ ಬಾಡಿ ಶೇಮಿಂಗ್ ಗೆ ಶಾಲಿನಿ ಒಳಗಾಗಿದ್ದು ಅದಕ್ಕೆ ಸರಿಯಾಗಿ ಕಮೆಂಟ್ ಮಾಡಿದ್ದಾರೆ ಶಾಲಿನಿ. ಬಾಡಿ ಶೇಮಿಂಗ್ ಮಾಡಿದ ಕಿಡಿಗೇಡಿಗಳಿಗೆ ಶಾಲಿನಿ ವಿಡಿಯೋದ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.

ಬಾಡಿ ಶೇಮ್ ಮಾಡೋ ಎಲ್ಲರಿಗೂ ನನ್ನ ಉತ್ತರ ಎಂದು ದುರ್ಗಿ ನಿಮಾದಲ್ಲಿರುವ ಬಿ.ಜಯಶ್ರೀ ಅವರ ‘ಬೀಳ್ತಾವ್ ನೋಡೀಗ ಕವ್ವಾತಗಳು’ ಹಾಡಿನ ತುಣುಕೊಂದನ್ನು ಶಾಲಿನಿ ಹಂಚಿಕೊಳ್ಳುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ಹೌದು, ಬೀಳ್ತಾವ್ ನೋಡೀಗ ಕವ್ವಾತಗಳು, ಮುರಿತಾವ್ ನೋಡೀಗ ಮೈಮೂಳೆಗಳು, ಬೀಳ್ತಾವ್ ನೋಡೀಗ ಬಾಸುಂಡೆಗಳು ಎಂದು ಶಾಲಿನಿ ಹೇಳಿದ್ದಾರೆ.

ಮುಖ್ಯವಾಗಿ ವಿಡಿಯೋದ ಜೊತೆಗೆ ಬಾಡಿಶೇಮಿಂಗ್‌ಗೆ ನೋ ಎಂದು ಹೇಳಿ, ಸದಾ ಆರೋಗ್ಯವಾಗಿರಿ, ಫ್ಯಾಟ್ ಈಸ್ ಬ್ಯೂಟಿಫುಲ್, ಬದುಕಿ ಮತ್ತು ಬದುಕಲು ಬಿಡಿ ಎಂದು ಕೂಡಾ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *