• August 2, 2023

ಸ್ಲೀಪ್ ವೆಲ್ ಕಿರುಚಿತ್ರಕ್ಕೆ ಸಿಕ್ತು ಪ್ರಶಸ್ತಿಗಳ ಸುರಿಮಳೆ.

ಸ್ಲೀಪ್ ವೆಲ್ ಕಿರುಚಿತ್ರಕ್ಕೆ ಸಿಕ್ತು ಪ್ರಶಸ್ತಿಗಳ ಸುರಿಮಳೆ.

ಚಿತ್ರ- ಸ್ಲೀಪ್ ವೆಲ್
ನಿರ್ದೆಶಕ- ಶಿವಪಚ್ಚಿ
ಸಂಗೀತ ನಿರ್ದೆಶಕ- ಅನಂತ್ ಕಾಮತ್
ಛಾಯಾಗ್ರಹಣ-ಪ್ರಶಾಂಕ್ ಯಾದವ್
ಸಂಕಲನ- ನವೀನ್ ಶೆಟ್ಟಿ
ಸಹಾಯಕ ನಿರ್ದೆಶಕರು- ಜಯಂತ್ ಬಣಕರ್- ಅಂಕುಶ್ ಗೌಡ
ಮುಖ್ಯ ಪಾತ್ರ- ಎಂ.ಕೆ.ಮಟ್ ಪ್ರಭು, ಶಿವಪಚ್ಚಿ

ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಹೊಸ ಹೊಸ ಕಥೆಯನ್ನ ಹೆಣೆದು ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಈಗಿನ ಟ್ರೆಂಡ್ ಗೆ ತಕ್ಕಂತೆ ಜನರಿಗೆ ಡಿಫರೆಂಟ್ ಕಂಟೆಂಟ್ ಕಥೆಯನ್ನ ಹೇಳುವ ಪ್ರಯತ್ನವನ್ನ ಹೆಸರಾಂತ ನಿರ್ದೆಶಕರಿಂದ ಹಿಡಿದು ಈಗಿನ ನವ ನಿದೇಶಕರು ಕೂಡ ಇದೇ ಕಾರ್ಯವನ್ನ ಮಾಡುತ್ತಿದ್ದಾರೆ. ಆದ್ರೆ ಇಂಡಸ್ಟ್ರೀಗೆ ಕಾಲಿಡುವ ಅದೆಷ್ಟೋ ಹೊಸಬರ ಸಿನಿಮಾ ಗೆಲ್ಲುತ್ತಿಲ್ಲ ಕೆಲ ಸಿನಿಮಾಗಳು ಮಾತ್ರ ಬಹುಮತದಿಂದ ಗೆಲ್ಲುತ್ತಿವೆ, ಅಂತಹ ಸಿನಿಮಾಗಳಲ್ಲಿ ಸ್ಲೀಪ್ ವೆಲ್ ಕಿರುಚಿತ್ರವೊಂದು. ಸ್ಲೀಪ್ ವೆಲ್ ಕಿರುಚಿತ್ರವು ನಿರ್ದೆಶಕ ಶಿವುಪಚ್ಚಿ ನಟಿಸಿ ಆಕ್ಷನ್ ಕಟ್ ಹೇಳಿರುವ ಸಿನಿಮಾ.

ಶೀ ಟೇಲ್ಸ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡ ಚಿತ್ತರ ವೀಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದು ಪ್ರಶಸ್ತಿಗೆ ಭಾಜನವಾಗಿದೆ. ರಿಟೈರ್ಡ್ ಆದ ವ್ಯಕ್ತಿಯೋರ್ವನು ಹಣದ ದುರಾಸೆಯಿಂದ ಅಮೂಲ್ಯವಾದ ನೆಮ್ಮದಿಯನ್ನ ಹಾಳು ಮಾಡಿಕೊಂಡು ಕೊನೆಗೊಂದು ದಿನ ತಾ ಬಿಟ್ಟರು ಕರ್ಮ ನನ್ನನ್ನು ಬಿಡುವುದಿಲ್ಲ ಎನ್ನುವಂತೆ ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎನ್ನುವ ಪ್ರಮುಖ ಸಂದೇಶವನ್ನು ಸಿನಿಮಾ ಸಾರುತ್ತದೆ.

ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿರುವ ಸ್ಲೀಪ್ ವೆಲ್ ಚಿತ್ರವು ಹಲವಾರು ಕಿರಿಚಿತ್ರೋತ್ಸವಗಳಲ್ಲಿ ತೆರೆಕಂಡು ನಿರೀಕ್ಷೇಗು ಮೀರಿ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಸದ್ಯಕ್ಕೆ ಈ ಸಿನಿಮಾಗೆ ಉತ್ತಮ ನಿರ್ದೆಶಕ ಉತ್ತಮ ನಟ ಎಂಬ ಪ್ರಶಸ್ತಿಗಳನ್ನ ಸ್ಲೀಪ್ ವೆಲ್ ಸಿನಿಮಾ ಭಾಚಿಕೊಂಡಿದೆ. ಇನ್ನು ಹೆಚ್ಚೆಚ್ಚು ಅವಾರ್ಡ್ಗಳು ಸಿನಿಮಾಗೆ ಸಿಗಲಿ ಸಾಕಷ್ಟು ಯಶಸ್ಸು ಕಾಣಲಿ ಎಂಬುದು ನಮ್ಮ ಆಶಯ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್