- June 20, 2023
‘ಗುಂಟೂರು’ ಸಿನಿಮಾದಲ್ಲಿ ಕನ್ನಡದ ನಟಿಯರು,ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ವಂತೆ, ಯಾರದು ಅಂತೀರಾ ಇಲ್ಲಿದೆ ನೋಡಿ.

ಮಂಗಳೂರು ಬ್ಯೂಟಿ ಪೂಜಾ ಹೆಗ್ಡೆ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್, ಹೃತಿಕ್ ರೋಷನ್, ಪ್ರಭಾಸ್‌ನಂಥ ಸ್ಟಾರ್ ನಟರೊಂದಿಗೆ ಪೂಜಾ ನಟಿಸಿದ್ದಾರೆ.ಪೂಜಾ ಹೆಗ್ಡೆ ಸಿನಿ ಕೆರಿಯರ್ ಕೆಳಗೆ ಬೀಳುತ್ತಿದೆ.

ಪೂಜಾ ನಟಿಸಿದ ಕೆಲ ಸಿನಿಮಾಗಳು ಸೋಲು ಕಂಡಿವೆ. ಪ್ರಭಾಸ್,ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಮುಗ್ಗಿರಿಸಿವೆ. ಈ ನಡುವೆ ನೆಟಿಜನ್ಸ್ ಪೂಜಾ ಹೆಗ್ಡೆ ಮೇಲೆ ಒಂದು ಆರೋಪ ಮಾಡಿದ್ದಾರೆ. ಶ್ರೀಲೀಲಾ ಹಾಗೂ ಪೂಜಾ ಹೆಗ್ಡೆ ಗುಂಟೂರು ಸಿನಿಮಾದಲ್ಲಿ ನಟಿಸುತ್ತಿದ್ದು, ಪೂಜಾ ಮಾತ್ರ ಶ್ರೀಲೀಲಾ ಜೊತೆ ಅಷ್ಟಕ್ಕೆ ಅಷ್ಟೆ ಅನ್ನುವ ಮಾತು ಕೇಳಿ ಬಂದಿದೆ.
ಗುಂಟೂರು ಕಾರಂ ಚಿತ್ರವನ್ನು ಎಸ್ ರಾಧಾಕೃಷ್ಣ ಹಾರಿಕಾ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು, ಪೂಜಾ ಹೆಗ್ಡೆ, ಶ್ರೀಲೀಲಾ, ಜಾನ್ ಅಬ್ರಾಹಂ, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.

ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ಮಹೇಶ್ ಬಾಬು ಜೊತೆ ಗುಂಟೂರು ಕಾರಂ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಆದರೆ ಶ್ರೀಲೀಲಾ ಜೊತೆಗೆ ಪೂಜಾ ಹೆಗ್ಡೆಗೆ ಫ್ರೆಂಡ್‌ಶಿಪ್ ಇಷ್ಟ ಇಲ್ಲ ಎನ್ನುವಂತೆ ವರ್ತಿಸುತ್ತಿದ್ಧಾರೆ ಎಂದು ಕೆಲವರು ಆರೋಪಿಸಿದ್ದಾರೆ. ಇತ್ತೀಚೆಗೆ ಶ್ರೀಲೀಲಾ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ಪೂಜಾ ಮಾತ್ರ ಸಹನಟಿಗೆ ಬರ್ತ್‌ಡೇ ವಿಶ್ ಮಾಡಿಲ್ಲ.
ಕೆಲವರು, ಪೂಜಾ ಹೆಗ್ಡೆ ಸಿನಿ ಕೆರಿಯರ್ ಕೆಳಗೆ ಬೀಳುತ್ತಿದೆ. ಅಂತದ್ದರಲ್ಲಿ ಆಕೆ ಮತ್ತೊಬ್ಬ ನಟಿಯನ್ನು ಹೇಗೆ ಪ್ರಮೋಟ್ ಮಾಡಲು ಇಷ್ಟಪಡುತ್ತಾರೆ ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಗುಂಟೂರು ಕಾರಂ ನಟಿಯರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆದ್ರೆ ಇಬ್ಬರು ನಟಿಯರು ಮಾತ್ರ ಈ ವಿಚಾರಕ್ಕೆ ತುಟಿ ಎರಡು ಮಾಡಿಲ್ಲ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್