• June 21, 2023

‘ಹನುಮಾನ್ ದೇವರೆ ಅಲ್ಲ’ ವಿವಾದದ ಸುಳಿಯಲ್ಲಿ“ಆಧಿಪುರುಷ್” ತಂಡ…!

ಪ್ರಭಾಸ್ ನಟನೆ, ಓಂ‌ರಾವತ್ ನಿರ್ದೇಶನದ ಆಧಿಪುರುಷ್ ಸಿನಿಮಾ ಬಿಡುಗಡೆಯಾಗಿ ಸಾಕಷ್ಟು ವಿವಾದಗಳಿಗೆ ಗುರಿಯಾದದ್ದು ನಿಮಗೆಲ್ಲ ಗೊತ್ತೆ ಇದೆ.ಅದರಂತೆ ಚಿತ್ರದಲ್ಲಿರುವ ಕೆಲವು ಸನ್ನಿವೇಶಗಳನ್ನ,ಸಂಭಾಷಣೆಗಳನ್ನ ಡಿಲೀಟ್ ಮಾಡುವಂತೆ ಜನತೆ ಒತ್ತಾಯಿಸಿದರು ಕೂಡ ಸಿನಿತಂಡ ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ.

ಹೀಗಿರುವಾಗಲೆ‌‌ ಸಿನಿತಂಡ ಮತ್ತೊಂದು ವಿವಾದವನ್ನ‌ ಎಳೆದುಕೊಂಡಿದೆ.ಕೆಲ ದಿನದ ಹಿಂದೆ ಸಂದರ್ಶನದಲ್ಲಿ ಮಾತನಾಡಿದ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಾಶೀರ್ ಅಸಲಿಗೆ “ಹನುಮಾನ್ ದೇವರೆ ಅಲ್ಲ ಅವನು ಶ್ರೀ ರಾಮನ‌‌ ಭಕ್ತ ಮಾತ್ರ, ಆತನಿಗೆ ಅಷ್ಟೊಂದು ಶಕ್ತಿ ಇದ್ದಿದರಿಂದಲೇ ನಾವೆಲ್ಲ‌ ಹನುಮಾನ್ ನನ್ನ ದೇವರಂತೆ ಕಾಣುತ್ತಿದ್ದೇವೆ ಅಂತಾ ಹೇಳಿಕೆ ನೀಡುವುದರ ಮೂಲಕ ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಜೂನ್‌ 16 ರಂದು ತೆರೆ ಕಂಡ ಆದಿಪುರುಷ್‌ ಸಿನಿಮಾ ಒಂದಲ್ಲಾ ಒಂದು ವಿವಾದವನ್ನು ಮೇ ಮೇಲೆ ಎಳೆದುಕೊಳ್ಳುತ್ತಿದೆ. ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಯಶಸ್ವಿ ಆಗದೆ ಇರುವುದು ಪ್ರಭಾಸ್‌ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಇಷ್ಟಾದರೂ ಚಿತ್ರತಂಡ ಮಾತ್ರ ಒಂದಲ್ಲಾ ಒಂದು ಸಮಸ್ಯೆಯನ್ನು ತಾನಾಗೇ ಮೈ ಮೇಲೆ ಎಳೆದುಕೊಳ್ಳುತ್ತಿದೆ.

ಇನ್ನೊಂದೆಡೆ ರಾಮಾಯಣದಿಂದ ಪ್ರೇರಿತಗೊಂಡು ಸಿನಿಮಾವನ್ನ ನಿರ್ಮಿಸಿರುವ ಚಿತ್ರತಂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ನೆಗೆಟಿವ್ ಕಮೆಂಟ್ ಗಳನ್ನ ಡಿಲೀಟ್ ಮಾಡಲು ಟ್ರೋಲ್ ಪೇಜ್ ಅಡ್ಮಿನ್ ಹಾಗು,ಸೋಷಿಯಲ್ ಮೀಡಿಯಾ ಅಡ್ಮಿನ್ ಗಳಿಗೆ ಹಣದ ಆಸೆ ತೋರಿಸಿದೆಯಂತೆ.

ಹಿಂದೂಗಳು ಶ್ರೀರಾಮನನ್ನು ಹೇಗೆ ದೇವರಂತೆ ಪೂಜಿಸುತ್ತಿದ್ದೇವೋ, ಹನುಮಂತನನ್ನು ಕೂಡಾ ಅಷ್ಟೇ ಭಕ್ತಿಯಿಂದ ಪೂಜಿಸುತ್ತಿದ್ದೇವೆ. ಎಷ್ಟೋ ಜನರಿಗೆ ಬಜರಂಗಬಲಿ ಇಷ್ಟವಾದ ದೇವತೆ ಆಗಿದ್ದಾರೆ. ಈ ಸಮಯದಲ್ಲಿ ಸಂಗೀತ ನಿರ್ದೇಶಕ ಈ ರೀತಿ ಹೇಳಿಕೆ ನೀಡಿರುವುದು ಚಿತ್ರದ ಮೇಲಿನ ಬೇಸರದ ಭಾವನೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇದು ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ ಆಗಿದೆ. ಹನುಮಂತನ ಭಕ್ತರು ಈತನ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚಿತ್ರತಂಡ ಪದೇ ಪದೆ ಭಕ್ತರ ಭಾವನೆಗೆ ಧಕ್ಕೆ ತರುತ್ತಿದೆ. ಚಿತ್ರತಂಡದವರನ್ನು ಸಂದರ್ಶನ ಮಾಡುವುದನ್ನು ನಿಲ್ಲಿಸಿ. ಆದಿಪುರುಷ್‌ ಚಿತ್ರವನ್ನು ಬ್ಯಾನ್‌ ಮಾಡಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಆದಿಪುರುಷ್‌ ಸಿನಿಮಾ ವಿವಾದ ಹೆಚ್ಚುತ್ತಲೇ ಇದೆ.