• August 1, 2023

ಸಿನಿಮಾಟೋಗ್ರಾಫರ್ ಮಸೂದೆ ಅಂಗೀಕಾರ, ಪೈರಸಿಗೆ ಬಿತ್ತು ಬ್ರೇಕ್, ನಿಯಮ ಉಲ್ಲಂಘಿಸಿದರೆ ಜೈಲೂಟ ಗ್ಯಾರಂಟಿ.

ಸಿನಿಮಾಟೋಗ್ರಾಫರ್ ಮಸೂದೆ ಅಂಗೀಕಾರ, ಪೈರಸಿಗೆ ಬಿತ್ತು ಬ್ರೇಕ್, ನಿಯಮ ಉಲ್ಲಂಘಿಸಿದರೆ ಜೈಲೂಟ ಗ್ಯಾರಂಟಿ.

ವಿಶ್ವದ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಭಾರತೀಯ ಚಲನಚಿತ್ರ್ಯೋದ್ಯಮವು ಕೂಡ ಒಂದು ಸುಮಾರು ೩೦೦೦ಕ್ಕೂ ಹೆಚ್ಚು ಚಲನಚಿತ್ರಗಳು ಇಲ್ಲಿ ೩೦ಕ್ಕೂ ಹೆಚ್ಚು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತವೆ. ಒಂದು ಸಿನಿಮಾ ನಿರ್ಮಾಣಕ್ಕಾಗಿ ನಿರ್ದೇಶಕ ನಿರ್ಮಾಪಕ, ನಟ,ನಟಿ ಲೈಟ್ ಬಾಯ್ ಸೇರಿದಂತೆ ಸಾಕಷ್ಠು ಜನರು ಒಂದು ಸಿನಿಮಾ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡಿರುತ್ತಾರೆ. ಆದ್ರೆ ಈ ಪೈರಸಿಯ ಹಾವಳಿಯಿಂದ ಕೆಲವರು ಸಿನಿಮಾವನ್ನ ಕದ್ದು ಮಾರಾಟ ಮಾಡಿದಾಗ ಅದರಿಂದ ಆಗುವ ನಷ್ಠವನ್ನ ಸಿನಿಮಾ ತಂಡಕ್ಕೆ ತುಂಬಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಸಿನಿಮಾಗಳ ಲಿಂಕ್ ಶೇರ್ ಆಗುತ್ತಿತ್ತು. ಇದರಿಂದ ಚಿತ್ರವನ್ನ ಕದ್ದು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಸುಮಾರು ೨೦.೦೦೦ ಕೋಟಿ ರೂಪಾಯಿ ನಷ್ಠವಾಗುತ್ತಿತ್ತು.

ಈ ಪ್ರಮುಖ ಅಂಶಗಳನ್ನ ತಡೆಯ ಬೇಕೆಂದು ಮುಂದಾದ ಕೇದ್ರ ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಸಿನಿಮಾಟೋಗ್ರಾಫ್ ತಿದ್ದುಪಡಿ ಕಾಯ್ದೆಯನ್ನ ಲೋಕಸಭೆಯಲ್ಲಿ ಮಂಡಿಸಿದ್ದರು. ಪ್ರತಿ ೧೦ ವರ್ಷಕ್ಕೊಮ್ಮೆ ಚಲನಚಿತ್ರದ ಪರವಾನಗಿಯನ್ನ ನವೀಕರಿಸುವ ಕಾಯ್ದೆಯನ್ನ ಸರ್ಕಾರ ತೆಗೆದುಹಾಕಿದೆ. ೪೦ ವರ್ಷಗಳ ನಂತರ ಸಿನಿಮಾಟೋಗ್ರಾಫ್ ಮಸೂದೆಯನ್ನ ಸಂಸತ್ತು ಅಂಗೀಕರಿಸಿದೆ. ಕ್ಯಾಮ್ ಕಾರ್ಡಿಂಗ್ ಹೊರತಾಗಿಆನ್ ಲೈನ್ ಪೈರಸಿ ಶಿಕ್ಷಾರ್ಹವಾಗಿದೆ. ಪೈರಸಿಯಿಂದ ಭಾರತೀಯ ಚಲನಚಿತ್ರೋದ್ಯಮಕ್ಕೆ ಆಗುತ್ತಿರುವ ನಷ್ಠವನ್ನ ವಿವರವಾಗಿ ತಿಳಿಸಿದಾಗ ಸಿನಿಮಾಟೋಗ್ರಾಫ್ ಮಸೂದೆಯನ್ನ ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ಭಾರತೀಯ ಚಲನಚಿತ್ರ್ಯೋದ್ಯಮವು ೧೦೦ ಬಿಲಿಯನ್ ಡಾಲರ್‌ಗೆ ಬೆಳೆಯಲಿದ್ದು ಲಕ್ಷಾಂತರ ಜನರಿಗೆ ಸಿನಿ ರಂಗದಲ್ಲಿ ಉದ್ಯೋಗ ನೀಡಲಿದೆ ಇದರಿಂದ ಚಿತ್ರರಂಗ ಇನ್ನಷ್ಠು ಬಲಗೊಳ್ಳಲಿದೆ. ಇನ್ನು ಮುಂದೆ ಸಿನಿಮಾವನ್ನ ಪೈರಸಿ ಮಾಡಿದರೆ ಅಂತವರಿಗೆ ಕನಿಷ್ಠ ೩ ತಿಂಗಳು ಸೆರೆವಾಸ, ೩ಕ್ಷ ರೂ ದಂಡ ಹಾಕಲಾಗುತ್ತಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರಿಂದ ಇನ್ನು ಮುಂದಾದರು ಪೈರಸಿ ಮಾಡುವವರು ಎಚ್ಚೆತ್ತುಕೊಳ್ಳುತ್ತಾರ ಅಂತಾ ನೋಡಬೇಕಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್