- August 22, 2023
ಯಶ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ ತಮಿಳು ನಟ ಜೈ ಆಕಾಶ್

ರಾಕಿಂಗ್ ಸ್ಟಾರ್ ಯಶ್ ವಿಚಾರವಾಗಿ ನಾಲಿಗೆ ಹರಿಬಿಟ್ಟಿದ್ದ ತಮಿಳು (Tamil) ನಟ ಜೈ ಆಕಾಶ್ ಕೊನೆಗೂ ಯಶ್ ಅಭಿಮಾನಿಗಳಿಗೆ ಕ್ಷಮೆ (Apologize) ಕೇಳಿದ್ದಾರೆ.
ಅಂದಹಾಗೆ ಈ ಜೈ ಆಕಾಶ್ ಕನ್ನಡದ ಜಂಭದ ಕೋಳಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾಗೆ ಯಶ್ ನಾಯಕ. ಯಶ್ ನಟನೆಯ ಮೊದಲ ಸಿನಿಮಾ ಕೂಡ ಇದಾಗಿತ್ತು. ಪ್ರಿಯಾ ಹಾಸನ್ ಈ ಸಿನಿಮಾದ ನಾಯಕಿ. ಜೈ ಆಕಾಶ್ ಆ ವೇಳೆ ಜನಪ್ರಿಯ ನಟರಲ್ಲವಾದರೂ ಯಶ್ ಅದು ಹೇಗೆ ಕಣ್ಣೀರು ಇಟ್ಟಿದ್ದರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.
ಯಶ್ ಸಿನಿಮಾ ರಂಗಕ್ಕೆ ಬಂದ ಹೊಸತರಲ್ಲಿ ಅವಕಾಶಕ್ಕಾಗಿ ನನ್ನ ಬಳಿ ಕಣ್ಣೀರಿಟ್ಟಿದ್ದರು. ಅವರಿಗೆ ನಾನು ಸಮಾಧಾನ ಹೇಳಿದ್ದೆ.
ಊಟ ಕೂಡ ಹಾಕಿದ್ದೆ ಎಂದು ಸಂದರ್ಶನವೊಂದರಲ್ಲಿ ಜೈ ಆಕಾಶ್ ಹೇಳಿಕೊಂಡಿದ್ದರು. ಈ ಮಾತು ಯಶ್ ಅಭಿಮಾನಿಗಳನ್ನು ಕೆರಳಿಸಿತ್ತು.

ಜೈ ಆಕಾಶ್ (Jai Akash) ಮಾತನಾಡಿದ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅದು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ, ಯಶ್ (Yash) ತಮ್ಮ ಬಳಿ ಅವಕಾಶಕ್ಕಾಗಿ ಕಣ್ಣೀರು ಹಾಕಿದ್ದರು. ಅವರಿಗೆ ನಾನು ಹೊಟ್ಟೆ ತುಂಬಾ ಊಟ ಹಾಕಿದ್ದೆ. ಇದೀಗ ಯಶ್ ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಎಂದು ಜೈ ಆಕಾಶ್ ಹೇಳಿದ್ದರ. ಆದರೆ, ಅದನ್ನು ಯಶ್ ಅಭಿಮಾನಿಗಳು ನಂಬಲು ತಯಾರಿರಲಿಲ್ಲ.
ಜೈ ಆಕಾಶ್ ಅವರ ವಿಡಿಯೋ ವೈರಲ್ ಆಗಿದ್ದರೂ, ಈ ಕುರಿತಾಗಿ ಯಶ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಸಲಿಯಾಗಿ ತಮಿಳು ನಟನ ಬಳಿ ಯಶ್ ಯಾವ ಕಾರಣಕ್ಕಾಗಿ ಸಹಾಯ ಕೇಳಿದರು ಎನ್ನುವುದು ಗೊತ್ತಿಲ್ಲ. ಇದು ಯಾವ ಸಂದರ್ಭದಲ್ಲಿ ಆಗಿದ್ದು ಎಂದು ಆ ನಟನೂ ಹೇಳಿಕೊಂಡಿಲ್ಲ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್